ಸುಬ್ರಹ್ಮಣ್ಯಕ್ಕೆ 24 x 7 ಆಸ್ಪತ್ರೆ ಸೇವೆಗಾಗಿ ಡಾl ರವಿ ಕಕ್ಕೆಪದವು ಟ್ರಸ್ಟ್ ವತಿಯಿಂದ ಮಾಜಿ ಸ್ಪೀಕರ್ ಗೆ ಮನವಿ

0

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸುಬ್ರಹ್ಮಣ್ಯದಲ್ಲಿ 24 x 7 ಆಸ್ಪತ್ರೆ ಸೇವೆಗಾಗಿ ಡಾl ರವಿ ಕಕ್ಕೆಪದವು ಟ್ರಸ್ಟ್ ವತಿಯಿಂದ ಡಿ.24 ರಂದು ಮನವಿ ಸಲ್ಲಿಸಲಾಯಿತು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಅವರನ್ನು ಭೇಟಿಯಾದ ಟ್ರಸ್ಟ್ ಸದಸ್ಯರು ಸುಬ್ರಹ್ಮಣ್ಯಕ್ಕೆ ಸುಸಜ್ಜಿತವಾದ 24 x 7 ಆಸ್ಪತ್ರೆ ಸೇವೆಗಾಗಿ ಮನವಿ ಸಲ್ಲಿಸಿದರು. ಕ್ಷೇತ್ರಕ್ಕೆ ಬರತಕ್ಕ ಭಕ್ತಾದಿಗಳು ಅಗತ್ಯ ಆರೋಗ್ಯ ಸೇವೆಗಾಗಿ ಪಡುವಂತಹ ಕಷ್ಟ ಪರಿಸ್ಥಿತಿಯನ್ನ ವಿವರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಮಾದವ ದೇವರಗದ್ದೆ, ಟ್ರಸ್ಟ್ ನ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.