ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜ. 4ರಿಂದ ಜ. 8ರ ತನಕ ನಡೆಯಲಿದ್ದು, ಡಿ. 24ರಂದು ಆಮಂತ್ರಣ ಪತ್ರ ಹಂಚಿಕೆ ಅಭಿಯಾನ ನಡೆಯಿತು. ಸದಾನಂದ ಕಾರ್ಜ ಅಭಿಯಾನ ಉದ್ಘಾಟಿಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ, ಪ್ರಧಾನ ಅರ್ಚಕ ಶ್ರೀವತ್ಸ ಎಂ.ವಿ., ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಗೌರವಾಧ್ಯಕ್ಷ ಭಾಸ್ಕರ ಗೌಡ ಪಂಡಿ, ಮಾಜಿ ಅಧ್ಯಕ್ಷ ಸದಾನಂದ ರೈ ಕಾರ್ಜ ಸೇರಿದಂತೆ ಬೈಲುವಾರು ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜ. 7ರಂದು ಬ್ರಹ್ಮ ರಥೋತ್ಸವ, ಬಳ್ಪ ಬೆಡಿ ನಡೆಯಲಿದೆ.