ಕರ್ನಾಟಕ ಸಂಭ್ರಮ ೫೦, ಹೆಸರಾಯ್ತು ಕರ್ನಾಟಕ, ಉಸಿರಾಗಲಿ ಕನ್ನಡ ಇದರ ಧ್ಯೇಯದೊಂದಿಗೆ ಸೈಂಟ್ ಮೇರಿಸ್ ಚರ್ಚ್, ಗುತ್ತಿಗಾರು ಹಾಗೂ ಬ್ಲೆಸ್ಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರು ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಕನ್ನಡ ನಾಡ ಗೀತೆ ಗಾಯನ ಸ್ಪರ್ಧೆಯನ್ನು 05-01-2024 ರಂದು ನಡೆಸಲು ಉದ್ದೇಶಿಸಲಾಗಿದೆ.
ಬೆಳಿಗ್ಗೆ 10.20 ಕ್ಕೆ ಸರಿಯಾಗಿ, ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಆರಂಭವಾಗಲಿದೆ. ಪ್ರಥಮ ಬಹುಮಾನ ರೂ 15000/ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 10000/- ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನ 7000/ ಮತ್ತು ಟ್ರೋಫಿ ಇರಲಿದೆ. ಮಕ್ಕಳಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಸಂಸ್ಕೃತಿ ಬೆಳೆಸುವ ಉದ್ದೇಶ ದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸೈಂಟ್ ಮೇರಿಸ್ ಚರ್ಚ್, ಗುತ್ತಿಗಾರು ಇದರ ಧರ್ಮಗುರು ಫಾದರ್ ಆದರ್ಶ್ ಜೋಸೆಫ್ ತಿಳಿಸಿದರು. ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದು ಪ್ರತಿ ವಿದ್ಯಾಸಂಸ್ಥೆ ಯಿಂದ ಒಂದು ತಂಡದಂತೆ ಭಾಗವಹಿಸಬಹುದಾಗಿದೆ.