ಜ.4ರಂದು ಸಂಪಾಜೆ ಸಂಯುಕ್ತ ಪದವಿ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ

0

ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ನಿಸರ್ಗ ರಂಗ ವೇದಿಕೆಯಲ್ಲಿ ಜ‌.4ರಂದು ಜರುಗಲಿದೆ.

ಕಾರ್ಯಕ್ರಮವನ್ನು ಚೆಂಬು ಗ್ರಾಮ ಪಂಚಾಯತಿ ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ, ಸಂಪಾಜೆ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಕೆ.ಜಿ. ರಾಜಾರಾಮ ಅಧ್ಯಕ್ಷತೆ ವಹಿಸಲಿದ್ದಾರೆ. ಕೊ.ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರಮಾದೇವಿ ಕಳಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ಗ್ರಾ.ಪಂ. ಉಪಾಧ್ಯಕ್ಷ ಎಸ್.ಕೆ. ಮಹಮ್ಮದ್ ಹನೀಫ್ , ಚೆಂಬು ಗ್ರಾ.ಪಂ‌. ಸದಸ್ಯ ರಮೇಶ್ ಹುಲ್ಲುಬೆಂಕಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟರಾಜು ಉಪಸ್ಥಿತರಿರಲಿದ್ದಾರೆ.

ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ದೊಡ್ಡೇಗೌಡ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂಪಾಜೆ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಯು.ಬಿ. ಚಕ್ರಪಾಣಿ, ಸಂಚಾಲಕ ಶಂಕರ ನಾರಾಯಣ ಭಟ್, ಖಜಾಂಜಿ ಬಿ.ಆರ್. ಪದ್ಮಯ್ಯ, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗೇಶ್ವರ್ ಎಸ್. ಗೌರವ ಉಪಸ್ಥಿತರಿರಲಿದ್ದಾರೆ.

ಸಂಪಾಜೆ ಎಜ್ಯುಕೇಶನ್ ಸೊಸೈಟಿ ಪದಾಧಿಕಾರಿಗಳಾದ ಕೆ.ಜಿ. ಮುರಳೀಧರ್, ಸುಬ್ರಹ್ಮಣ್ಯ ಉಪಾದ್ಯಾಯ, ಡಾ. ಜಯರಾಮ ಯು.ಪಿ., ಜಯರಾಮ ಕೆ.ಎಸ್., ನಾರಾಯಣ ಭಟ್ ಕೆ.ಎಸ್. ಗಣಪತಿ ಭಟ್ ಪಿ.ಎನ್., ಎಂ.ಕೃಷ್ಣಪ್ಪ , ರಾಮ ಪಾಟಾಳಿ , ಕೊರಗಪ್ಪ ಅರಮನೆತೋಟ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪೋಷಕರ ಸಮ್ಮಿಲನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.