ಕುಕ್ಕುಜಡ್ಕ: ವಿಷ್ಣುನಗರದ ವಿಷ್ಣುಮೂರ್ತಿ, ರಕ್ತೇಶ್ವರೀ ಪರಿವಾರ ದೈವಸ್ಥಾನದಲ್ಲಿ 70 ನೇ ವಾರ್ಷಿಕ ಉತ್ಸವ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರದ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ 70 ನೇ ವಾರ್ಷಿಕ ಉತ್ಸವವು ಕ್ಷೇತ್ರದ ಆಚಾರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಪದ್ಮನಾಭ ತಂತ್ರಿಗಳ ನಿರ್ದೇಶನದಂತೆ ಇಂದು ಬೆಳಗ್ಗೆ ಆರಂಭಗೊಂಡಿದೆ.

ಬೆಳಗ್ಗೆ ಸ್ಥಳೀಯ ಭಜನಾ ಮಂಡಳಿಗಳಾದ ಶ್ರೀ ಮಹಾವಿಷ್ಣು ಭಜನಾ ಸಂಘ ಕುಕ್ಕುಜಡ್ಕ, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕಳಂಜ, ಶ್ರೀ ರಾಮ ಭಜನಾ ಮಂಡಳಿ ಪೈಲಾರು,ಶ್ರೀ ವೇದತ್ರಯ ಭಜನಾ ಮಂಡಳಿ ಉಬರಡ್ಕ, ಶ್ರೀ ದೇವಿ ಬಳಗ ಚೊಕ್ಕಾಡಿ, ಶ್ರೀ ಧರ್ಮಶಾಸ್ತ್ರ ಭಜನಾ ಮಂಡಳಿ ಪಿಲಿಕಜೆ, ಶ್ರೀರಾಮ ಭಜನಾ ಮಂಡಳಿ ಕಲ್ಮಡ್ಕ, ಶ್ರೀ ಸಮರ್ಪಣಾ ಭಜನಾ ಮಂಡಳಿ ಕುಕ್ಕುಜಡ್ಕ ಇವರಿಂದ ಭಜನಾ ಸೇವೆಯು ನಡೆಯಿತು. ಸಂಜೆ ವಿಶೇಷವಾಗಿ ಆಕರ್ಷಣೀಯ ಕುಣಿತ ಭಜನೆಯು ನಡೆಯಲಿರುವುದು. ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಸತ್ಯನಾರಾಯಣ ದೇವರ ಪೂಜೆಯು ನಡೆದು ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಶ್ರೀ ದೈವಗಳಿಗೆ ಹೊರೆ ಕಾಣಿಕೆ ಸಮರ್ಪಣೆಯು ನಡೆಯಿತು.

ಅಪರಾಹ್ನ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ಭಂಡಾರ ಇಳಿದು ಸಂಜೆ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳಾದ ಶ್ರೀ ಧರ್ಮಸ್ಥಳ ಪಂಜುರ್ಲಿ, ಜಾವತೆ, ಮಂತ್ರವಾದಿ ಗುಳಿಗ, ರಕ್ತೇಶ್ವರಿ ಗುಳಿಗ, ಶ್ರೀ ಕಲ್ಕುಡ, ಕಲ್ಲುರ್ಟಿ ಮತ್ತು ಅಂಗಾರ ಬಾಕುಡ ದೈವಗಳ ನರ್ತನ ಸೇವೆಯು ನಡೆಯಲಿದೆ.