ಅಧ್ಯಕ್ಷರಾಗಿ ಹಾಜಿ ಪಿ ಇಸಾಕ್ ಸಾಹೇಬ್, ಉಪಾಧ್ಯಕ್ಷರಾಗಿ ಶರೀಫ್ ಭಾರತ್ ಬಾಳಿಲ, ಪ್ರಧಾನ ಕಾರ್ಯದರ್ಶಿಯಾಗಿ ಖಲೀಲ್ ಅಯ್ಯನಕಟ್ಟೆ ಆಯ್ಕೆ
ಮುಹಿಯದ್ದೀನ್ ಜುಮ್ಮಾ ಮಸೀದಿ ಅತ್ತಿಕ್ಕರಮಜಲ್,ಪಾಜಪಳ್ಳ ಬಾಳಿಲ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಹಾಜಿ ಪಿ ಇಸಾಕ್ ಸಾಹೇಬ್ ಇವರ ನೇತೃತ್ವದಲ್ಲಿ ಡಿ.29 ರಂದು ಜುಮಾ ನಂತರ ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಮಸೀದಿ ಖತೀಬರಾದ ಬಹು ಯಾಸಿರ್ ಅರಾಫತ್ ಕೌಸರಿ ಅವರು ದುವಾ ಮೂಲಕ ಮಹಾಸಭೆಯನ್ನು ಉದ್ಘಾಟಿಸಿದರು.ಖಲೀಲ್ ಅಯ್ಯನಕಟ್ಟೆಯವರು ವರದಿ ವಾಚಿಸಿದರು.ಶರೀಫ್ ಭಾರತ್ ಅವರು ವಾರ್ಷಿಕ ಜಮಾ ಖರ್ಚುಗಳನ್ನು ಮಂಡಿಸಿದರು. ಜಮಾಅತ್ ಸದಸ್ಯರುಗಳು ವಾರ್ಷಿಕ ಕಾರ್ಯ ವೈಖರಿಗಳ ಬಗ್ಗೆ ಆಡಳಿತ ಸಮೀತಿಯೊಂದಿಗೆ ಚರ್ಚಿಸಿದ ನಂತರ ಈ ಹಿಂದಿನ ಸಮೀತಿಯನ್ನು ಬರ್ಕಾಸ್ತುಗೊಳಿಸಿ ನೂತನ ಆಡಳಿತ ಸಮೀತಿಯನ್ನು ರಚಿಸಲಾಯಿತು.
ನೂತನ ಆಡಳಿತ ಸಮೀತಿಯ ಅಧ್ಯಕ್ಷರಾಗಿ ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ, ಉಪಾಧ್ಯಕ್ಷರಾಗಿ ಶರೀಫ್ ಭಾರತ್ ಬಾಳಿಲ, ಪ್ರಧಾನ ಕಾರ್ಯದರ್ಶಿಯಾಗಿ ಖಲೀಲ್ ಅಯ್ಯನಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಹಿಮಾನ್ ದೇರಂಪಾಲ್ ಮತ್ತು ಅಷ್ಫಕ್ ಪಂಜಿಗಾರ್, ಖಜಾಂಜಿಯಾಗಿ ನಾಸಿರ್ ಆರಂಡ, ಕಾರ್ಯಕಾರಿ ಸಮೀತಿ ಸದಸ್ಯರುಗಳಾಗಿ ಇಸ್ಮಾಯಿಲ್ ನೀರ್ಪಂಜ,ಮಹಮ್ಮದ್ ಎಂ. ಎಸ್,ಇಬ್ರಾಹಿಂ ಅತ್ತಿಕರಮಜಲ್,ಖಾಲಿದ್ ಕಳಂಜ, ಮುಹಮ್ಮದ್ ಅಗಲ್ಪಾಡಿ ಇವರುಗಳನ್ನು ಸರ್ವಾನುಮತಗಳಿಂದ ಆಯ್ಕೆ ಮಾಡಲಾಯಿತು.ಈ ಸಂಧರ್ಭದಲ್ಲಿ ಮುಅದ್ದಿನ್ ಉಸ್ತಾದರಾದ ಬಹು ಝುಬೈರ್ ಮುಸ್ಲಿಯಾರ್ ಅವರು ಉಪಸ್ಥಿತರಿದ್ದರು.