ಇಂದು ಸಂಜೆ ಕುಕ್ಕನ್ನೂರು ದೈವಗಳ ಭಂಡಾರ ಆಗಮನವಾಗಿ ಧ್ವಜಾರೋಹಣ
ಸುಳ್ಯದ ಶ್ರೀ ಚೆನ್ನಕೇಶವ ದೇವರ ವರ್ಷಾವಧಿ ಜಾತ್ರೋತ್ಸವವು ಜ.3ರಂದು ರಾತ್ರಿ ಧ್ವಜಾರೋಹಣದ ಮೂಲಕ ಪ್ರಾರಂಭಗೊಳ್ಳಲಿದೆ.
ಇಂದು ಸಂಜೆ ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ – ಪೂಮಾಣಿ ಉಳ್ಳಾಕುಲು ದೈವಗಳ ಭಂಡಾರವು ಕುಕ್ಕನ್ನೂರಿನ ಶ್ರೀ ಗುರುಮಾಳ್ಯ ಚಾವಡಿಯಿಂದ ಹೊರಟು ಆರ್ತಾಜೆ, ಪೈಚಾರು ಮೂಲಕ ರಾಜಮಾರ್ಗವಾಗಿ ಸಾಗಿ ಸುಳ್ಯದ ಶ್ರೀರಾಮ ಭಜನಾ ಮಂದಿರದ ಕಟ್ಟೆಯಲ್ಲಿ ಸಂಕ್ರಾಂತಿ ಪೂಜೆ ನಡೆಯಲಿದೆ.
ಬಳಿಕ ಸುಳ್ಯ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಶ್ರೀ ಚೆನ್ನಕೇಶವ ದೇವರ ಸನ್ನಿಧಿಗೆ ಬರಲಿದ್ದು, ಶ್ರೀ ದೈವದ ಭಂಡಾರವು ಶ್ರೀ ಚೆನ್ನಕೇಶವ ದೇವರಿಗೆ ಅಭಿಮುಖವಾಗಿ ನಿಂತು ಧ್ವಜಾರೋಹಣದ ಮೂಲಕ ವರ್ಷಾವಧಿ ಜಾತ್ರೋತ್ಸವವು ಪ್ರಾರಂಭಗೊಳ್ಳಲಿದೆ.
ಜ.8ರಂದು ರಾತ್ರಿ ಶ್ರೀ ಕುಕ್ಕನ್ನೂರು ದೈವಗಳ ಭಂಡಾರ ತೆಗೆದು ಶ್ರೀ ಚೆನ್ನಕೇಶವ ದೇವರ ಉತ್ಸವ ಬಲಿ ನಡೆಯಲಿದ್ದು, ಜ.9ರಂದು ಬೆಳಿಗ್ಗೆ ಶ್ರೀ ಕುಕ್ಕನ್ನೂರು ದೈವಗಳ ಭಂಡಾರ ತೆಗೆದು ಶ್ರೀ ಚೆನ್ನಕೇಶವ ದೇವರ ಸಣ್ಣ ದರ್ಶನ ಬಲಿ ನಡೆಯಲಿದೆ.
ಜ.13ರಂದು ಬೆಳಿಗ್ಗೆ ಶ್ರೀ ದೈವಗಳ ಭಂಡಾರವು ಕುಕ್ಕನ್ನೂರಿಗೆ ಹಿಂತಿರುಗಿ ಬರಲಿದೆ.