ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಬಗ್ಗೆ ಪೂರ್ವಭಾವಿ ಸಭೆ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವವು ಫೆ.8,9,ಮತ್ತು 10 ರಂದು ನಡೆಯಲಿದ್ದು ಈ ಬಗ್ಗೆ ಪೂರ್ವಭಾವಿ ಸಭೆಯು ಜ.01 ರಂದು ನಡೆಯಿತು.
ದೇವಸ್ಥಾನದ ಆಡಳಿತಾಧಿಕಾರಿ ಶ್ಯಾಮ್ ಪ್ರಸಾದ್ ರವರು ಸ್ವಾಗತಿಸಿ,ಜಾತ್ರೋತ್ಸವವು ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಕೋರಿದರು.
ಜಾತ್ರೋತ್ಸವದ ಧಾರ್ಮಿಕ ಕಾರ್ಯಕ್ರಮಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು,ಆಮಂತ್ರಣ ಮುದ್ರಣ ಗ್ರಾಮದ ಮನೆಗಳಿಗೆ ಆಮಂತ್ರಣ ತಲುಪಿಸುವ ವ್ಯವಸ್ಥೆ,ಭೋಜನದ ವ್ಯವಸ್ಥೆ,ವಾಹನ ಪಾರ್ಕಿಂಗ್ ಹಾಗು ಇತರ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ವ್ಯ.ಸ.ಮಾಜಿ ಸದಸ್ಯರಾದ ವಾಮನ ಗೌಡ ಕೋಂದ್ರಮಜಲು,ದಾಸಪ್ಪ ಗೌಡ ಕೋಡ್ತೀಲು,ದೇವಿದಾಸ್ ಕತ್ಲಡ್ಕ,ತಾರಾ ರಾವ್ ಉದ್ದಂಪಾಡಿ,ದಯಾನಂದ ಚೆಮ್ನೂರು, ಪದ್ಮಾವತಿ ಖಂಡಿಗೆಮೂಲೆ,ಕರಿಯಪ್ಪ ಕೋಡ್ತೀಲು, ರಾಜಾರಾಮ ರಾವ್ ಉದ್ದಂಪಾಡಿ, ಮಾಧವ ಭಟ್ ಶೃಂಗೇರಿ, ರಾಮಚಂದ್ರ ಪಲ್ಲತ್ತಡ್ಕ,ಶಿವರಾಮ ನೆಕ್ರೆಪ್ಪಾಡಿ,ನವೀನ ಚಾತುಬಾಯಿ,ಸತೀಶ ಎಡಮಲೆ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸಹಕಾರಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ, ಗ್ರಾ.ಪಂ.ಸದಸ್ಯ ದೇವಿಪ್ರಸಾದ್ ಎನ್.ಎಸ್., ವೆಂಕಪ್ಪ ಗೌಡ ಜಬಳೆ,ಶೇಖರ ಮಡ್ತಿಲ ,ಶಾಂತಾರಾಮ ಕಣಿಲೆಗುಂಡಿ,ಚಂದ್ರಶೇಖರ ,ದೇವಸ್ಥಾನದ ಕಚೇರಿ ವ್ಯವಸ್ಥಾಪಕ ಯಶವಂತ ಬಾರೆತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.