ವಳಲಂಬೆ ಶಾಲಾ ವಾರ್ಷಿಕೋತ್ಸವ, ಜನಪದ ವೈಭವ 2024

0

ಸರಕಾರಿ ಹಿ.ಪ್ರಾ.ಶಾಲೆ ವಳಲಂಬೆ ಇದರ ಶಾಲಾ ವಾರ್ಷಿಕೋತ್ಸವ ಮತ್ತು ಜನಪದ ವೈಭವ 2024 ಜ.6 ರಂದು ನಡೆಯಿತು. ಜನಪದ ವೈಭವ ಸಮಾರಂಭ ಕಾರ್ಯಕ್ರಮಕ್ಕೆ ಶಾಸಕಿ ಕುlಭಾಗೀರಥಿ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ ಎಸ್ ಎಸ್ ಸೇವಾ ಸಂಗಮ ಟ್ರಸ್ಟ್ ನ ಗೌರವಾಧ್ಯಕ್ಷ ಬಾಲಕೃಷ್ಣ ಗೌಡ ಬೊಳ್ಳೂರು ವಹಿಸಿದ್ದರು. ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಸಹಾಯಕ ಪ್ರಾಧ್ಯಾಪಕರಾದ ಡಾl ವಿಶ್ವನಾಥ್ ಬದಿಕಾನ ಪ್ರಧಾನ ಭಾಷಣ ಮಾಡಿದರು. ಗುತ್ತಿಗಾರು ಪ್ರಾ.ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ, ರೇವತಿ ಆಚಳ್ಳಿ, ಉದ್ಯಮಿ ಉಮೇಶ್ ಮುಂಡೋಡಿ, ರಾಜ್ಯ ಯುವ ಒಕ್ಕೂಟ ಸದಸ್ಯ ಶಿವಪ್ರಕಾಶ್ ಕಡಪಳ ಅತಿಥಿಗಳಾಗಿದ್ದರು.

ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ, ಸಲಹಾ ಸಮಿತಿ ಸದಸ್ಯೆ ಅನುರಾಧ ಕುರುಂಜಿ, ವಳಲಂಬೆ ಶಾಲ ಮುಖ್ಯ ಶಿಕ್ಷಕಿ ಪ್ರಮೀಳಾ ಪಿ.ಎಸ್, ಎಸ್ ಡಿ ಎಂ ಸಿ ಅಧ್ಯಕ್ಷ ರವೀಶ ಕುಮಾರ ಮೊಟ್ಟೆಮನೆ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ, ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ ಇದರ ಅಧ್ಯಕ್ಷ ವಿಜೇತ್ ಶಿರ್ಲಾಲ್ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಶಿಕ್ಷಕಿ ಸ್ನೇಹಲತಾ ಪುರುಷೋತ್ತಮ ಮಣಿಯಾನ ಮನೆ ಹಾಗೂ ಜಯರಾಮ ಗೌಡ ಅಡ್ಡನಪಾರೆ ಇವರುಗಳನ್ನು ಗೌರವಿಸಲಾಯಿತು.
ಜ. 4 ರಂದು ಎನ್ ಎಸ್ ಎಸ್ ಸೇವಾ ಸಂಘ ಟ್ರಸ್ಟ್ ವತಿಯಿಂದ ರಾಜ್ಯಮಟ್ಟದ ನಾಯಕತ್ವ ಶಿಬಿರವು ನಡೆದಿದ್ದು ಬಾಲಕೃಷ್ಣ ಬೊಳ್ಳೂರು ಉದ್ಘಾಟಿಸಿದರು. ಅದು ಜ.5 ರ ವರೆಗೆ ನಡೆಯಿತು. ಜ.6 ರಂದು ಶಾಲಾ ಮಕ್ಕಳ, ಅಂಗನವಾಡಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ಜನಪದ ವೈಭವದ ಸ್ಪರ್ಧಾ ಕಾರ್ಯಕ್ರಮ ನಡೆಯಿತು.