ದ.ಕ ತೆಂಗು ರೈತ ಉತ್ಪಾದಕರ ಸಂಸ್ಥೆಯ ನೂತನ ಗೌರವ ಸಲಹೆಗಾರ ಸಮಿತಿಯ ರಚನೆ

0

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಯೋಜನೆಗಳ ಬಗ್ಗೆ ಪೂರ್ವಭಾವಿ ಸಭೆಯು ಜ. 05 ರಂದು ಪುತ್ತೂರಿನ ರೋಟರಿ ಮನಿಷಾ ಹಾಲ್ ನಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಕುಸುಮಾದರ ಗುತ್ತಿಗಾರು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಲಹಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಲಹಾ ಸಮಿತಿ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ಕಡಮಜಲು ಸುಭಾಷ್ ರೈ.ಸಂಸ್ಥೆಯ ಕಾನೂನು ಸಲಹೆಗಾರ ಚಿದಾನಂದ ಬೈಲಾಡಿ,ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಸಲಹೆಗಾರ ಬದನಾಜೆ ಶಂಕರ್ ಭಟ್, ಕೃಷಿ ಮಾಧ್ಯಮ ಸಲಹೆಗಾರ ಕುಮಾರ್ ಪೆರ್ನಾಜೆ,ಕೃಷಿ ಅಭಿವೃದ್ಧಿ ಸಲಹೆಗಾರ ಪ್ರಭಾಕರ್ ಮಯ್ಯ,ಸುಸ್ಥಿರ ಕೃಷಿ ಸಲಹೆಗಾರ ಅಮೈ ಮಾಲಿಂಗ ನಾಯ್ಕ, ಸಾವಯವ ಕೃಷಿ ಸಲಹೆಗಾರ ಗಣಪಯ್ಯ ಭಟ್, ಯೋಜನೆಯ ಅಭಿವೃದ್ಧಿ ಸಲಹೆಗಾರ ಐತ್ತೂರು ಪೂವಪ್ಪ ಗೌಡ, ಜಲ ಸಂರಕ್ಷಣೆ ಸಲಹೆಗಾರ ಡೇವಿಡ್ ಜೈಮಿ ಕೊಕ್ಕಡ ರವರನ್ನು ಆಯ್ಕೆ ಮಾಡಲಾಯಿತು.

ಮುಂದಿನ ಹಂತದ “ಕಲ್ಪ ವಿಕಾಸ ” ಮಹತ್ವಾಕಾಂಕ್ಷಿ ಯೋಜನೆಯ ರೂಪು -ರೇಷೆಗಳ ಬಗ್ಗೆ ಹಾಗೂ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ಹಾಗೂ ಸಂಸ್ಥೆಯ ವತಿಯಿಂದ ಪತ್ರಿಕೆ ಮುದ್ರಿಸುವ ಕುರಿತು ಸಂಸ್ಥೆಯ ಅಧ್ಯಕ್ಷರು ಪ್ರಸ್ತಾಪಿಸಿದರು.

ಸಂಸ್ಥೆಯ ಸಿ.ಇ.ಒ ಚೇತನ್ ಎ, ಸಂಸ್ಥೆಯ ಮುಖ್ಯ ಸಲಹೆಗಾರ ಯತಿಕಾರ್ಪ್ ಇಂಡಿಯಾ ಪ್ರೈವೇಟ್ಲಿಮಿಟೆಡ್ ಸಿ.ಇ.ಒಯತೀಶ ಕೆ .ಎಸ್, ಆಡಳಿತ ನಿರ್ದೇಶಕ ಗಿರಿಧರ್ ಸ್ಕಂದ, ಲತಾ.ಕೆ, ವಸಂತ ಕೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.