ಅರಂತೋಡು ಜಮಾಅತ್ ದುಬೈ ಸಮಿತಿಯ ವಾರ್ಷಿಕ ಮಹಾಸಭೆ

0

ಅರಂತೋಡು ಜಮಾಅತ್ ದುಬೈ ಸಮಿತಿಯ ವಾರ್ಷಿಕ ಮಹಾಸಭೆಯು ದುಬೈಯಲ್ಲಿರುವ ಮುಕ್ತಾರ್ ಪಠೇಲ್ ನಿವಾಸದಲ್ಲಿ ಜ.13 ರಂದು ಬದುರುದ್ದೀನ್ ಪಠೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ಮುಕ್ತಾರ್ ಪಠೇಲ್ ರವರು ಸ್ವಾಗತಿಸಿ. ಅರಂತೋಡು ಮಸೀದಿಯ ಬೆಳವಣಿಗೆಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗೌರವಾಧ್ಯಕ್ಷ ಬದುರುದ್ದೀನ್ ಪಠೇಲ್ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ನೂತನ ಸಾಲಿಗೆ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಬದುರುದ್ದೀನ್ ಪಠೇಲ್, ಅಧ್ಯಕ್ಷರಾಗಿ ಮುಕ್ತಾರ್ ಪಠೇಲ್, ಉಪಾಧ್ಯಕ್ಷರಾಗಿ ಅಶ್ರಫ್ ಆದೂರ್, ರಹೀಮ್ ಉದಯನಗರ ಅರಂತೋಡು, ಪ್ರದಾನ ಕಾರ್ಯದರ್ಶಿಯಾಗಿ ಸಲಾಹುದ್ದೀನ್ ಪಠೇಲ್, ಜೊತೆ ಕಾರ್ಯದರ್ಶಿಯಾಗಿ ರಶೀದ್ ಅಡಿಮರಡ್ಕ, ಕೋಶಾಧಿಕಾರಿಗಳಾಗಿ ನಾಸಿರುದ್ಧೀನ್ ಪಠೇಲ್ ಹಾಗೂ ಸರ್ಫ್ ರಾಜ್ ನವಾಜ್ ಕಾಸರಗೋಡು ಸಂಚಾಲಕರಾಗಿ ಸೈಫುದ್ದೀನ್ ಪಠೇಲ್, ರಾಫಿ ಆರಿಕ್ಕಾಡಿ, ಅಸ್ಲಾಂ ಪಟೇಲ್ ನಿರ್ದೇಶಕರುಗಳಾಗಿ ಆಸಿಫ್ ಅರಂತೊಡು, ರಿಪಾಯಿ ಪಟೇಲ್, ನೂರುದ್ಧೀನ್ ಪಠೇಲ್, ಮುಸ್ತಫ ಅರಂತೋಡು, ಕೆ.ಎಂ ಅನ್ವಾರ್ ಪಠೇಲ್, ಬಾತಿಷ ಬಿಳಿಯಾರ್, ರಾಶೀದ್ ಅರಂತೋಡು, ರವೂಫ್ ಆರಿಕ್ಕಾಡಿ, ಯಾಸಿರ್ ಸಣ್ಣಮನೆ, ಪಯಾಝ್ ಪಠೇಲ್, ನಿಝಾರ್ ಪಠೇಲ್ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಅಶ್ರಫ್ ವಹೀಬ್, ಸಮಿರ್ ಕಲ್ಲಾರೆ ಪುತ್ತೂರು, ಅಬ್ದುಲ್ ರಹಿಮಾನ್ ಪೈಬಂಚ್ಚಾಲ್ ಆಯ್ಕೆಯಾದರು, ಅಬ್ಬಾಸ್ ಸರ್ವೆ ಆಯ್ಕೆಯಾದರು.