ಸರಕಾರಿ ಪ್ರೌಢಶಾಲೆ ಮರ್ಕಂಜ ಕ್ಕೆ ಬೆಂಗಳೂರಿನ ಉಜ್ಜೀವನ್ ಬ್ಯಾಂಕ್ ಮೂಲಕ ಪ್ರದೀಪ್ ಜೈನ್ ಬಲ್ನಾಡುಪೇಟೆ ಇವರಿಂದ ಕಂಪ್ಯೂಟರ್ ಕೊಡುಗೆ

0

ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿಗೆ ಶಾಲೆಯ ಹಳೆ ವಿದ್ಯಾರ್ಥಿ ಯಾಗಿದ್ದ ಮರ್ಕಂಜ ಗ್ರಾಮದ ಬಲ್ನಾಡುಪೇಟೆ ಪ್ರದೀಪ್ ಜೈನ್ ರವರು 9 ಕಂಪ್ಯೂಟರ್ ನ್ನು ಉಜ್ಜೀವನ್ ಬ್ಯಾಂಕ್ ಬೆಂಗಳೂರು ಇದರ ಮೂಲಕ ಕೊಡುಗೆಯಾಗಿ ನೀಡಿದ್ದಾರೆ.

ಪ್ರಸ್ತುತ ಉಜ್ಜೀವನ್ ಬ್ಯಾಂಕ್ ಬೆಂಗಳೂರಿನಲ್ಲಿ ಹೌಸಿಂಗ್ ‌ಲೋನ್ ಡಿಪಾರ್ಟ್ಮೆಂಟ್ ನಲ್ಲಿ ನ್ಯಾಷನಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್ ಜೈನ್ ರವರು ತಾವು ಕಲಿತ ಶಾಲೆಗೆ 9 ಕಂಪ್ಯೂಟರ್ ಗಳನ್ನು ತಮ್ಮ ಸಂಸ್ಥೆಯ ಮೂಲಕ ಒದಗಿಸಿದ್ದಾರೆ. ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್ ಕಲಿಕೆಯಲ್ಲಿ ಮುಂದಿವರಿಯಬೇಕು ಎಂಬ ಆಶಯದಲ್ಲಿ ಈ ಕಂಪ್ಯೂಟರ್ ಗಳನ್ನು ಇತ್ತೀಚೆಗೆ ಶಾಲೆಗೆ ಹಸ್ತಾಂತರಿಸಿದರು.‌

ಈ ಸಂದರ್ಭದಲ್ಲಿ ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗೀತಾ‌ ಹೊಸೊಳಿಕೆ, ಮುಖ್ಯೋಪಾಧ್ಯಾಯರಾದ ವೀಣಾ ಎಂ.ಟಿ., ಎಸ್.ಡಿ.ಎಂ.ಸಿ.‌ಅಧ್ಯಕ್ಷರಾದ ಅನಂದ ಬಾಣೂರು, ಹಿರಿಯರಾದ ತಮ್ಮಪ್ಪ‌ ಗೌಡ ಪೂಂಬಾಡಿ, ಶಿಕ್ಷಕ‌ ವೃಂದ, ಪೋಷಕರು ಉಪಸ್ಥಿತರಿದ್ದರು.