ಫೆ.10ರಂದು ಕೊಲ್ಲಮೊಗ್ರ ದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ

0

ಇಂದು ಪೂರ್ವಭಾವಿ ಸಭೆ

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಹಾಗೂ ಜಿಲ್ಲಾಡಳಿತ, ತಾಲೂಕು ಆಡಳಿತ, ಸ್ಥಳೀಯಾಡಳಿತಗಳ ಸಹಕಾರದಲ್ಲಿ ಕೊಲ್ಲಮೊಗ್ರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕುರಿತು ಪೂರ್ವಭಾವಿ ಸಭೆ ಇಂದು ಕೊಲ್ಲಮೊಗ್ರದ ಮಯೂರ ಕಲಾ ಮಂದಿರದಲ್ಲಿ‌ ನಡೆಯಿತು.‌

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಗ್ರಾಮವಾಸ್ತವ್ಯದ ಬಗ್ಗೆ ವಿವರಿಸಿ ಗ್ರಾಮವಾಸ್ತವ್ಯ ಕಾರ್ಯಕ್ರಮ ದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ, ಸಮುದಾಯ ಸಮಸ್ಯೆ, ವೈಯಕ್ತಿಕ ಸಮಸ್ಯೆ ಗಳ ಬಗ್ಗೆ ಅರ್ಜಿ ನೀಡಲು ಅವಕಾಶ, ಸಂಜೆ ಚಾವಡಿ ಚರ್ಚೆ, ಮಧ್ಯಾಹ್ನ ಎಲೆಚುಕ್ಕಿ ರೋಗದ ಬಗ್ಗೆ ತಜ್ಞರಿಂದ ಮಾಹಿತಿ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಚಿಂತನ ಮಂಥನಗಳು ನಡೆಯಲಿದೆ.
ಕಾರ್ಯಕ್ರಮದಲ್ಲಿ 29 ಇಲಾಖೆಗಳ ಅಧಿಕಾರಿಗಳು ಬಂದು ಗ್ರಾಮಸ್ಥರಿಗೆ ಮಾಹಿತಿ
ನೀಡುವ ವ್ಯವಸ್ಥೆ ನಡೆಯಲಿದೆ‌. ರಾಜ್ಯ ಮಟ್ಟದ ಪತ್ರಕರ್ತರು, ಜಿಲ್ಲಾಧಿಕಾರಿಯಾಗಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕೆಲವೊಂದು ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಯಲಿದೆ. ಅಲ್ಲದೇ ಆಧಾರ್ ಕಾಡ್೯ ತಿದ್ದುಪಡಿ, ಆರೋಗ್ಯ ತಪಾಸಣೆ ಯಂತಹ ಕಾರ್ಯಕ್ರಮಗಳು ಇದೆ ಎಂದು ವಿವರಿಸಿದರು. ಬಳಿಕ ಗ್ರಾಮಸ್ಥರು ಗ್ರಾಮದ ಸಮಸ್ಯೆ ಮತ್ತು ಬೇಡಿಕೆಗಳ ಸರಮಾಲೆಯನ್ನು ಹೇಳತೊಡಗಿದರು.

ವೇದಿಕೆಯಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್, ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಚಾಂತಾಳ, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ಅಧ್ಯಕ್ಷ ವಿಜಯ ಅಂಞಣ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ, ಹರಿಹರ ಕೊಲ್ಲಮೊಗ್ರ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಹರ್ಷ ದೇವಜನ, ಕೋಶಾಧಿಕಾರಿ ಪುಷ್ಪರಾಜ್ ಉಪಸ್ಥಿತರಿದ್ದರು.

ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಪ್ರಾಸ್ತಾವಿಕ ವಾಗಿ‌ ಮಾತನಾಡಿದರು.

ಸಭೆಯಲ್ಲಿ ಗ್ರಾಮದ ಪ್ರಮುಖರಾದ ಶೇಖರ್ ಅಂಬೆಕಲ್ಲು, ವಿನೂಪ್‌ ಮಲ್ಲಾರ, ಲೋಕಯ್ಯ ಗೌಡ ಕುಂಞೆಟಿ, ಸತೀಶ್ ಕೊಮ್ಮೆಮನೆ, ರಾಧಾಕೃಷ್ಣ ಬಾಳುಗೋಡು, ಸೋಮಶೇಖರ ಬಾಳುಗೋಡು, ಜಯಂತ ಬಾಳುಗೋಡು, ದಿವಾಕರ ಮುಂಡಾಜೆ, ಹರಿಪ್ರಸಾದ್ ಮಲ್ಲಾಜೆ, ಲಕ್ಷ್ಮೀಶ ಶೀರೂರು, ಬಾಲಸುಬ್ರಹ್ಮಣ್ಯ ಹರಿಹರ, ಸತೀಶ್ ಕಲ್ಮಕಾರು, ಮಾಧವ ಚಾಂತಾಳ, ಲೋಕೇಶ್ ಬಿ.ಎನ್. ಶಾಂತಾಳ, ಕುಶಾಲಪ್ಪ ಕಾಂತುಕುಮೇರಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ದಯಾನಂದ ಕೊರತ್ತೋಡಿ ಮತ್ತಿತರರಿದ್ದರು. ಫೆ.10ರಂದು ಗ್ರಾಮವಾಸ್ತವ್ಯ ನಡೆಸುವುದೆಂದು ಸಭೆಯಲ್ಲಿ ತೀರ್ಮಾನವಾಯಿತು.