ಕಲ್ಲುಗುಂಡಿಯ ಯಶಸ್ವಿ ಯುವಕ ಮಂಡಲ, ಗಣೇಶೋತ್ಸವ ಸಮಿತಿ, ಬಿ. ಎಂ. ಎಸ್ ಆಟೋ ಚಾಲಕ ಮಾಲಕರ ಸಂಘ ಹಾಗೂ ಊರವರ ಸಹಯೋಗದಲ್ಲಿ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲ ವಿಗ್ರಹಕ್ಕೆ ಪ್ರಾನಪ್ರತಿಷ್ಠಾ ಪ್ರಯುಕ್ತ ಕಲ್ಲುಗುಂಡಿಯ ಕೂಲಿ ಶೇಡ್ದ್ನಿಂದ ಮೇಲಿನ ಪೇಟೆವರೆಗೆ ಸಿಹಿತಿಂಡಿ ವಿತರಣೆ, ಕರ ಸೇವಕರಿಗೆ ಸನ್ಮಾನ ನಂತರ ಸುಳ್ಯಕೋಡಿ ಹನುಮಂತ ಗುಡಿಯಲ್ಲಿ ಆಂಜನೇಯ ದೇವರಿಗೆ ಡಿ. ಆರ್. ನಾರಾಯಣ್ ರಾವ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.