ಸುಬ್ರಹ್ಮಣ್ಯ ಗ್ರಾ.ಪಂ ಎದುರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎದುರು ಪ್ರತಿಭಟಿಸುವ ಎಚ್ಚರಿಕೆ
ಸುಬ್ರಹ್ಮಣ್ಯದಲ್ಲಿ ಜ.೨೨ ರಂದು ಕಾಂಗ್ರೆಸ್ ಗ್ರಾಮ ಸಮಿತಿ ಪತ್ರಿಕಾಗೋಷ್ಠಿ ನಡೆಸಿ
ಸುಬ್ರಹ್ಮಣ್ಯ ಗ್ರಾ.ಪಂ ಎದುರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದವರು ಕೆಲ ಬೇಡಿಕೆಗಳು ಈಡೇರಿಸಿಲ್ಲ ಎಂದು ಆರೋಪಿಸಿ ಅವುಗಳ ಕಛೇರಿ ಎದುರು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ
ಸುಬ್ರಹ್ಮಣ್ಯ ಗ್ರಾ.ಪಂನ
ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಆಸಮರ್ಪಕ ರೀತಿಯಲ್ಲಿ ರಚಿಸಿ ಗೊಬ್ಬರ ಉತ್ಪಾದರೆ ಹಲವು ಸಮಯದಿಂದ ನಿಲುಗಡೆಯಾಗಿ ಗ್ರಾ. ಪಂ ಹಲವು ಲಕ್ಷ ರೂಪಾಯಿಗಳು ನಷ್ಟ ಉಂಟಾಗಿ ಗ್ರಾಮದ ಅಭಿವೃದ್ಧಿಗೆ ತೊಡಕು ಉಂಟಾಗಿರುವುದು. ಪ್ಲಾಸ್ಟಿಕ್ ಸುಡುವ ಯಂತ್ರ ಕೆಟ್ಟುಹೋಗಿರುವ ಬಗ್ಗೆ ಗ್ರಾಮಸಭೆಯಲ್ಲಿ ಯಂತ್ರ ಸರಬರಾಜು ಮಾಡಿರುವ ಕಂಪ ವಿರುದ್ಧ ಕಾನೂನು ಕ್ರಮ ಹಾಗೂ ಇಲಾಖಾ ತನಿಖೆ ನಡೆಸದೇ ಇರುತ್ತಾರೆ. ಕುಕ್ಕೆ ಶ್ರೀ ಸುಬ್ರಹಣ , ದೇವಳದಿಂದ ಬರಬೇಕಾದ ತೆರಿಗೆ ಹಣವನ್ನು ವಸೂಲು ಮಾಡಲು ನ್ಯಾಯಾಲಯ ಆದೇಶ ಮಾಡಿದರೂ ಕೂಡಾ ಯಾವುದೇ ಕ್ರಮ ವಹಿಸದಿರುವ ಬಗ್ಗೆ , ಗ್ರಾಮ ಪಂಚಾಯತ್‌ನಲ್ಲಿ ಸಾಕಷ್ಟು ಸಿಬ್ಬಂದಿಗಳಿದ್ದರೂ ೯/೧೧ ಸಹಿತ ಹಲವು ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದರೂ ಕ್ರಮ ವಹಿಸದಿರುವ ಬಗ್ಗೆ, ಸುಬ್ರಹ್ಮಣ್ಯ ಗ್ರಾ ಪಂ. ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಸಂಬಂಧಿಸಿದ ಪ್ರಾಧಿಕಾರದ ಮುಖಾಂತರ ಅನುಷ್ಠಾನಗೊಳಿಸಲು ಪ್ರಯತ್ನಿಸದೆ ಆಡಳಿತ ಮಂಡಳಿಯು ತೀವ್ರ ನಿರ್ಲಕ್ಷ್ಯವನ್ನು ವಹಿಸಿ ಗ್ರಾಮಸ್ಥರಿಗೆ ಹಾಗೂ ಭಕ್ತಾಧಿಗಳಿಗೆ ತೊಂದರೆ ಉಂಟುಮಾಡುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ತುರ್ತಾಗಿ ಗಮನಹರಿಸಿ ಸಡಿಸಲು ಒತ್ತಾಯ ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯತು ಎದುರು ೧೦ ದಿನಗಳ ಒಳಗೆ ಶಾಂತಿಯುತವಾಗಿ ಕಾನೂನು ವ್ಯಾಪ್ತಿಯೊಳಗೆ ಪ್ರತಿಭಟನೆ ಮಾಡಲು ನಿರ್ಧಾರವನ್ನು ಮಾಡಿರುತ್ತೇವೆ. ಇದಲ್ಲದೆ ಈ ಬಗ್ಗೆ ೧೦ ದಿನಗಳ ಒಳಗೆ ನಮ್ಮ ಸಮಿತಿಯನ್ನು ಸಂಪರ್ಕಿಸಿ , ತಾವುಗಳು ಕ್ರಮ ವಹಿಸುವ ಮಾಹಿತಿಯನ್ನು ನೀಡಿದಲ್ಲಿ ಅದಕ್ಕೆ ನಮ್ಮ ಸಂಪೂರ್ಣ ಸಹಕಾರನ್ನು ನೀಡುತ್ತೇವೆ . ತಪ್ಪಿದಲ್ಲಿ ಪಂಚಾಯತ್ ಕಛೇರಿಯ ಎದುರುಗಡೆ ಪ್ರತಿಭಟನೆ ನಡೆಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದಲ್ಲದೆ
ಇದಲ್ಲದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಸ್ತಿಯನ್ನು ಸೂಕ್ತ ರೀತಿಯಲ್ಲಿ ರಕ್ಷಣೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿ ಆದೇಶವಿದ್ದರೂ ತೆರವು ಮಾಡದಿರುವುದು, ಷಷ್ಠಿ ಸಂದರ್ಭ ಏಕಾಹ ಭಜನೆ ಮಾಡದಿರುವ ಮುಂತಾದವುಗಳ ಬಗ್ಗೆ ಪತ್ರ ಚಳವಳಿ ಮಾಡುವುದಾಗಿ ಹೇಳಿಕೊಂಡರು. ಲಕ್ಷದೀಪ ಕಾರ್ಯಕ್ರಮದಲ್ಲೂ ಆಡಳಿತ ವೈಫಲ್ಯ ಉಂಟಾಗಿದೆ. ದೇವಸ್ಥಾನದ ಬೆಳ್ಳಿ ಅಂಗಡಿ ಏಲಂ ಮಾಡದಿರುವುದು, ಪಾರ್ಕಿಂಗ್ ಅವ್ಯವ್ಯವಸ್ಥೆ, ತುರ್ತು ಸಂದರ್ಭ ಬೇಕಾದ ಕೆ.ಎಸ್.ಆರ್.ಟಿ.ಸಿ ಬಸ್ ತಂಗುದಾಣದ ದಕ್ಷಿಣ ಪ್ರವೇಶ ದ್ವಾರ ವನ್ನು ತುರ್ತು ಸಂದರ್ಭವೂ ಉಪಯೋಗಿಸದಂತೆ ಮಾಡಿರುವುದು ಮುಂತಾದ ಸಮಸ್ಯೆ ಬಗೆಹರಿಸದೇ ಇದ್ದಲಿ ದೇವಸ್ಥಾನದ ಆಡಳಿತ ಕಛೇರಿ ಎದುರು ಮೌನ ಪ್ರತಿಭಟನೆ ಮಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯದರ್ಶಿ ಪವನ್ ಎಂ.ಡಿ, ಶಿವರಾಮ ರೈ,
ಶಿವರಾಮ ರೈ ,ಗೋಪಾಲಕೃಷ್ಣ ಭಟ್, ರವೀಂದ್ರ ಕುಮಾರ್ ರುದ್ರಪಾದ ಹಾಗೂ ಸುಬ್ರಹ್ಮಣ್ಯ ರಾವ್ ಉಪಸ್ಥಿತರಿದ್ದರು.