ಅಡಿಕೆ ಕಳ್ಳ ಸಾಗಾಟ ತಡೆಗೆ ಕ್ಯಾಂಪ್ಕೋ ಸಂಸ್ಥೆ ಆಗ್ರಹ

0

ವಿದೇಶಿ ಅಡಕೆ ಬೇರೆ ಬೇರೆ ವಿಧಗಳಲ್ಲಿ ಕಳ್ಳ ಸಾಗಾಟವಾಗಿ ಅವ್ಯಾಹತವಾಗಿ ಬರುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪ್ಕೋ ಆಗ್ರಹಿಸಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮಗ್ರ ಕಾರ್ಗೋ ಟರ್ಮಿನಲ್ ಮೂಲಕ ವಿವಿಧ ಭಾಗಗಳಿಂದ ಅಡಕೆ ಮಂಗಳೂರಿಗೆ ಬಂದು ಇಲ್ಲಿಂದಲೇ ಬೇರೆ ಬೇರೆ ಪ್ರದೇಶಗಳಿಗೆ ರವಾನೆಯಾಗುತ್ತಿದೆ ಎಂಬ ಮಾಹಿತಿ ಇದೆ. ಅಡಕೆ ಬೆಳೆಯ ಪಾರಂಪರಿಕ ಕ್ಷೇತ್ರಗಳಾದ ಕರಾವಳಿ ಮತ್ತು ಮಲೆನಾಡಿನಲ್ಲೂ ಕಳ್ಳ ಸಾಗಾಣಿಕೆಯ ಕಬಂಧಬಾಹು ಚಾಚಿರುವುದು ಆತಂಕದ ಸರ್ಕಾರ ವಿಷಯವಾಗಿದೆ. ಬರುತ್ತಿರುವ ಅಡಕೆಯ ಮೂಲ, ಅದರ ದರ ಮತ್ತು ದಾಖಲೆಗಳನ್ನು ಪರಿಶೀಲಿಸಬೇಕು. ಸರ್ಕಾರಕ್ಕೆ ತೆರಿಗೆ ಪಾವತಿಯಲ್ಲಿ ಆಗುವ ವಂಚನೆ ಬಗ್ಗೆ ತನಿಖೆ ನಡೆಸಬೇಕೆಂದು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾ‌ರ್ ಕೊಡ್ಲಿ ಒತ್ತಾಯಿಸಿದ್ದಾರೆ. ಕಾನೂನುಬಾಹಿರ ಅಡಕೆ ಆಮದು ಬಗ್ಗೆ ಕ್ಯಾಂಪ್ಕೋ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದೆ. ಕರ್ನಾಟಕ ಸರ್ಕಾರ ಕೂಡ ರಾಜ್ಯದೊಳಗೆ ನಡೆಯುವ ಅಡಕೆ ಕಾಳಸಂತೆ ದಂಧೆಯನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದ್ದಾರೆ.