ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಹೃದಯ ಸಂಬಂಧಿತ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಉದ್ಘಾಟನೆ

0

ಸುಳ್ಯದ ಕೆ.ವಿ.ಜಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಇಲ್ಲಿ ಹೃದಯ ಸಂಬಂಧಿತ ಶಸ್ತ್ರ ರಹಿತ ಚಿಕಿತ್ಸೆಗೆ ಸಂಬಂಧಿಸಿದ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಇದರ ಅತ್ಯಾಧುನಿಕ ಕ್ಯಾಥ್ ಲ್ಯಾಬ್‌ನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ| ಕೆ.ವಿ. ಚಿದಾನಂದ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶಸ್ತ್ರ ರಹಿತ ಹೃದಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆಗಳನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಈ ಆಸ್ಪತ್ರೆಯಲ್ಲಿ ನೀಡಲಾಗುವುದು ಹಾಗೂ ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ತಿಳಿಸಿದರು.

ಈ ಕಾರ್ಯ ಕ್ರಮದಲ್ಲಿ ಶ್ರೀಮತಿ ಶೋಭಾ ಚಿದಾನಂದ ಉಪಾಧ್ಯಕ್ಷರು, ಜಗದೀಶ್ ಅಡ್ತಲೆ, ಡೀನ್ ನೀಲಾಂಬಿಕೈ ನಟರಾಜನ್, ಡಾ| ವಿಶುಕುಮಾರ್, ಡಾ| ಸಿ. ಆರ್. ಭಟ್, ಡಾ| ಸುಬ್ರಹ್ಮಣ್ಯ, ಡಾ। ಸತ್ಯವತಿ ಆಳ್ವ, ಡಾ| ಗೀತಾದೊಪ್ಪ, ಡಾ| ನವ್ಯ, ಹಾಗೂ ಡಾ| ಪ್ರಕಾಶ್ ರಾವ್ ಉಪಸ್ಥಿತರಿದ್ದರು, ಹೃದಯ ಸಂಬಂದಿತ ಕಾಯಿಲೆಗಳ ಚಿಕಿತ್ಸಾ ಸೇವೆಗೆ ಪ್ರತಿ ಬುಧವಾರ, ತಜ್ಞರಾದ ಡಾ| ವಿಶುಕುಮಾರ್ ಹಾಗೂ ಪ್ರತಿ ಶನಿವಾರ ಡಾ। ಭರತೇಶ್ ಇವರು ಸೇವೆಗೆ ಲಭ್ಯರಿರುತ್ತಾರೆ.