ಮಕ್ಕಳೇ ದೇಶದ ಆಸ್ತಿ : ಹರ್ಷ ಜೋಗಿಬೆಟ್ಟು
ಬೆಳ್ಳಾರೆ ಕೆಪಿಎಸ್ ಪ್ರಾಥಮಿಕ ವಿಭಾಗದಲ್ಲಿ 75 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಟ್ಟಡ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರ್ಷ ಜೋಗಿಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ, ಧ್ವಜವಂದನೆ ,ಅಂಬೇಡ್ಕರ್ ಹಾಗೂ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ನಡೆಯಿತು. ಮಕ್ಕಳೇ ದೇಶದ ಆಸ್ತಿ. ದೇಶ ಪ್ರಗತಿಯ ಪಥದಲ್ಲಿ ಸಾಗುತ್ತಾ ಇರುವ ಈ ಸಮಯದಲ್ಲಿ ಮಕ್ಕಳು ತಮ್ಮ ಕಲಿಕೆಯನ್ನು ಉತ್ತಮವಾಗಿ ನಿರ್ವಹಿಸಿ ಶಾಲೆ, ಶಿಕ್ಷಕರು ಮತ್ತು ಪೋಷಕರಿಗೆ ಕೀರ್ತಿ ತರಬೇಕು. ಮಕ್ಕಳ ಪಾತ್ರ ದೇಶಕ್ಕೆ ಬಹುಮುಖ್ಯವಾಗುತ್ತದೆ ಎಂದು ಕಟ್ಟಡ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ ಜೆ ಜೋಗಿಬೆಟ್ಟು ಹೇಳಿದರು.
ಮಕ್ಕಳಿಂದ ನಡೆದ ಶಿಸ್ತುಬದ್ಧ ಕವಾಯತು, ಡOಬೆಲ್ಸ್, ಮನಮೋಹಕ ಏರೋಬಿಕ್ ಪ್ರದರ್ಶನಗಳು ಎಲ್ಲರ ಮನಸೂರೆಗೊಂಡಿತು.
ಇನ್ಸಪೈರ್ ಅವಾರ್ಡ್, ದತ್ತಿನಿಧಿ ಪ್ರಶಸ್ತಿಗಳನ್ನು ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೀಡಿ ಪುರಸ್ಕರಿಸಲಾಯಿತು.
ಮುಖ್ಯ ಶಿಕ್ಷಕರಾದ ಮಾಯಿಲಪ್ಪರವರು ಮಕ್ಕಳಿಗೆ ಗಣರಾಜ್ಯೋತ್ಸವದಂದು ಶೌರ್ಯ ಪ್ರಶಸ್ತಿ ಕೊಟ್ಟು ಗೌರವಿಸಲಾಗುತ್ತದೆ. ಅಂತಹ ಸಾಧನೆಗಳು ನಿಮಗೆ ಪ್ರೇರಣೆ ಎಂದು ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು.
ಮಹತಿ ಮತ್ತು ಬಳಗ ಪ್ರಾರ್ಥಿಸಿದರು. ಶಿಕ್ಷಕಿ ಅನ್ನಪೂರ್ಣ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು. ಶಿಕ್ಷಕಿ ಸುಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ತಾಯಂದಿರ ಸಮಿತಿಯ ಅಧ್ಯಕ್ಷೆ ಪ್ರಿಯಾಂಕ, ಪೋಷಕರ ಪ್ರತಿನಿಧಿಯಾಗಿ ವಿಜಯಲಕ್ಷ್ಮಿ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾದರು.