ನಾಳೆ ಪಂಜ-ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ಬೆಳ್ಳಿ ಹಬ್ಬ ಸಂಭ್ರಮ

0

🔹 ಕ್ರೀಡಾ ಸ್ಪರ್ಧೆಗಳು, ಹಗ್ಗಜಗ್ಗಾಟ


🔹ಸನ್ಮಾನ-ಪದಗ್ರಹಣ ಸಮಾರಂಭ


🔹ಭಕ್ತಿ ಪ್ರಧಾನ ತುಳುನಾಟಕ

ಪಂಜದ ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗ 1997 ರಲ್ಲಿ ಸ್ಥಾಪನೆ ಗೊಂಡಿತ್ತು. ನಿರಂತರವಾಗಿ ಧಾರ್ಮಿಕ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದ ಕಲಾ ರಂಗ ಇಂತಹ ಕಾರ್ಯಕ್ರಮಗಳಲ್ಲಿ ದಾನಿಗಳಿಂದ ಸಂಗ್ರಹ ಗೊಂಡ ಉಳಿಕೆ ಹಣವನ್ನು ಕೂಡು ಕಟ್ಟಿನ ದೈವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಿ ಮಾದರಿಯಾಗಿದೆ. ಅಲ್ಲದೇ ನೊಂದವರ ಬಾಳಿಗೆ ಬೆಳಕಾಗುವ ದೃಷ್ಟಿಕೋನದಿಂದ
ಬಡವರ ಮನೆ ದುರಸ್ಥಿ, ಬಡವರಿಗೆ ಆರೋಗ್ಯ ಸಮಸ್ಯೆ ಬಂದಾಗ ಅವರ ಆಸ್ಪತ್ರೆ ಖರ್ಚು ಬರಿಸುವುದು, ಪರಿಸರದ ಮನೆಗಳಲ್ಲಿ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸುವುದು. ವಿಶೇಷ ಯೋಜನೆಯಾಗಿ ಕಲಾರಂಗದ ಪ್ರತಿ ಸದಸ್ಯರ ಮನೆಗಳಲ್ಲಿ ಸಮರ್ಪಣಾ ನಿಧಿ ಹುಂಡಿ ಇರಿಸಲಾಗಿದ್ದು, ಇದನ್ನು ಕಡು ಬಡವರ ಚಿಕಿತ್ಸೆಗೆ,ವಿದ್ಯಾಭ್ಯಾಸಕ್ಕೆ ಮೀಸಲಿಡಲಾಗಿದೆ .ಊರ-ಪರವೂರ ದೇವಸ್ಥಾನ-ದೈವಸ್ಥಾನಗಳಲ್ಲಿ ಅನೇಕ ಸಂಘ ಸಂಸ್ಥೆಗಳಲ್ಲಿ ,ಕರಸೇವೆ ಮೊದಲಾದ ಆದರ್ಶ ಕಾರ್ಯಕ್ರಮಗಳ ಮೂಲಕ ಜನರ ಪ್ರೀತಿ ಮನ್ನಣೆ ಗಳಿಸಿರುವ ಶಿಸ್ತು ಬದ್ಧ ಸಂಘಟನೆಯಾಗಿ ಬೆಳೆದಿದ್ದು ,ಈಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.

ಜ.28 ರಂದು ಬೆಳ್ಳಿ ಹಬ್ಬ “ಬೊಳ್ಳಿ ಪಜ್ಜೆ” ವಿವಿಧ ಕಾರ್ಯಕ್ರಮಗಳೊಂದಿಗೆ
ವಿಜೃಂಭಣೆಯಿಂದ ಪಂಜದ ಪಲ್ಲೋಡಿಯಲ್ಲಿ ನಡೆಯಲಿದೆ.

ಬೊಳ್ಳಿ-ಪಜ್ಜೆ – 2024 ಪ್ರಯುಕ್ತ ಜ.28 ರಂದು ಪೂರ್ವಾಹ್ನ ಗಂಟೆ 9.30 ರಿಂದ
ಸಭಾ ಕಾರ್ಯಕ್ರಮ, ಪದಗ್ರಹಣ ಸಮಾರಂಭ ಹಾಗೂ ಶ್ರೀ ಉಳ್ಳಾಕುಲು ಕಲಾ ರಂಗದ ನೂತನ ಕಟ್ಟಡದ ಗುದ್ದಲಿ ಪೂಜೆ ನಡೆಯಲಿದೆ.

ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಕವನ್ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ.ಶಾಸಕಿ ಭಾಗೀರಥಿ ಮುರುಳ್ಯ ನೂತನ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್, ಕಲಾ ರಂಗದ ಸ್ಥಾಪಕಾಧ್ಯಕ್ಷ ಲೋಕೇಶ್ ಬರೆಮೇಲು ಉಪಸ್ಥಿತರಿರುವರು.

ಕ್ರೀಡಾ ಸ್ಪರ್ಧೆಗಳು: ಪುರುಷರ 550 ಕೆ.ಜಿ. ಲೆವೆಲ್ ಮತ್ತು ಮಹಿಳೆಯರ ಮುಕ್ತ ಲೆವೆಲ್ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ.
ಪುರುಷರ ಪ್ರಥಮ ರೂ.8000, ದ್ವಿತೀಯ ರೂ.6000, ತೃತೀಯ ರೂ.4000, ಚತುರ್ಥ ರೂ.3000, ಮಹಿಳೆಯರ ಪ್ರಥಮ ರೂ.5000, ದ್ವಿತೀಯ ರೂ.3000, ತೃತೀಯ ಮತ್ತು ಚತುರ್ಥ ತಲ ರೂ.2000 ಹಾಗೂ
ನಗದು ಬಹುಮಾನ ದೊಂದಿಗೆ ಟ್ರೋಪಿ ಇರುತ್ತದೆ.


ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.ಅಂಗನವಾಡಿ ಪುಟಾಣಿಗಳಿಗೆ ಓಟ ಮತ್ತು ಬಕೆಟ್ ಗೆ ಬಾಲ್ ಹಾಕುವುದು, 1ರಿಂದ 4ನೇ ತರಗತಿ ಮಕ್ಕಳಿಗೆ 100 ಮೀಟರ್ ಓಟ ಮತ್ತು ಬಕೆಟ್ ಗೆ ಬಾಲ್ ಹಾಕುವುದು,
5ರಿಂದ 7ನೇ ತರಗತಿ ಮಕ್ಕಳಿಗೆ ಸಂಗೀತ ಕುರ್ಚಿ ಮತ್ತು 100ಮೀ.ಓಟ, 8 ರಿಂದ 10 ನೇ ತರಗತಿ ಮಕ್ಕಳಿಗೆ ಓಟ-ಗೂಟ ‌ಸುತ್ತಿ ಓಟ, ಹಿರಿಯರಿಗೆ ಓಟ-ಗೂಟ ‌ಸುತ್ತಿ ಓಟ ಸ್ಪರ್ಧೆಗಳು ಇರುತ್ತದೆ.

ಸಂಜೆ ಗಂಟೆ 7 ರಿಂದ ಸನ್ಮಾನ, ಸಮಾರೋಪ ಸಮಾರಂಭ, ಸಮರ್ಪಣಾ ನಿಧಿ ವಿತರಣೆ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಕಲಾ ರಂಗದ ಅಧ್ಯಕ್ಷ ಬಾಲಕೃಷ್ಣ ಪಲ್ಲೋಡಿ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದ ನಿವೃತ್ತ ತಾಂತ್ರಿಕ ಅಧಿಕಾರಿ ನೋಂಡಪ್ಪ ನಾಯ್ಕ ಚಾಳೆಗುಳಿ ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಧವ ಗೌಡ ಬೇರ್ಯ ಸನ್ಮಾನಿಸಲಿದ್ದಾರೆ.

ಸಮಾಜ ಸೇವೆ ಬಿ ಯಂ ಆನಂದ ಗೌಡ ಕಂಬಳ, ಸಾಂಸ್ಕೃತಿಕ ಪ್ರಶಾಂತ್ ರೈ ಪಲ್ಲೋಡಿ, ವಿದೂಷಿ ಪೃಥ್ವಿ ಶೆಟ್ಟಿ ಪಲ್ಲೋಡಿ, ಕ್ರೀಡೆ ಪ್ರಜ್ವಲ್ ಶೆಟ್ಟಿ ಪಲ್ಲೋಡಿ, ಅವನಿ ಪಳಂಗಾಯ, ಚಿನ್ಮಯಿ ಆಳ್ವ, ಯೋಗ ಅನ್ವಿತ್ ಶೆಟ್ಟಿ ಪಲ್ಲೋಡಿ, ಚಿತ್ರಕಲೆ ಜಸ್ವಿತ್ ತೋಟ , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್, ಯುವ ತೇಜಸ್ ಟ್ರಸ್ಟ್ ರವರು ಸನ್ಮಾನ ಸ್ವೀಕರಿಸಲಿದ್ದಾರೆ.

ರಾತ್ರಿ ಗಂಟೆ 9 ರಿಂದ ವಿಟ್ಲ ಮೈರ ಕೇಪು ಶ್ರೀ ದುರ್ಗಾ ಕಲಾ ತಂಡದ
ಪುಗರ್ತೆ ಕಲಾವಿದೆರ್ ಅಭಿನಯಿಸುವ
ಅದ್ದೂರಿ ಭಕ್ತಿ ಪ್ರಧಾನ ತುಳು ನಾಟಕ ‘ಕಲ್ಜಿಗದ ಕಾಳಿ ಮಂತ್ರ ದೇವತೆ’ ಪ್ರದರ್ಶನ ಗೊಳ್ಳಲಿದೆ.