ಬೊಳುಬೈಲು: ಪೀಸ್ ಸ್ಕೂಲಿನಲ್ಲಿ ಗಣರಾಜ್ಯೋತ್ಸವ

0

ಬೊಳುಬೈಲು ನ ಪೀಸ್ ಸ್ಕೂಲ್ ನಲ್ಲಿ 75ನೇ ಗಣರಾಜ್ಯೋತ್ಸವವು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಟಿ.ಎಂ ಶಹೀದ್ ರವರು ಆಗಮಿಸಿ ಧ್ವಜಾರೋಹಣ ನೆರವೇರಿಸಿದರು.

ತೌಹಿದ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಫೌಂಡೇಶನ್ ಬೊಳುಬೈಲು ಅಧ್ಯಕ್ಷ ಕೆ.ಅಬೂಬಕ್ಕರ್ ,ಉಪಾಧ್ಯಕ್ಷ ಶಂಸುದ್ದೀನ್ ಹಾಗೂ ಉದ್ಯಮಿ ಫಾರೂಕ್ ಪೈಚಾರ್ ಉಪಸ್ಥಿತರಿದ್ದರು. ಪೀಸ್ ಸ್ಕೂಲ್ ಪ್ರಾಂಶುಪಾಲ ಮುಹಮ್ಮದ್ ಸೈಫುಲ್ಲಾ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಮಹತ್ವದ ಕುರಿತಾಗಿ ತಿಳಿ ಹೇಳಿದರು . ಕಾರ್ಯಕ್ರಮದಲ್ಲಿ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಪದಕ ಗಳಿಸಿದ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಹನಾನ್ ಬನ್ ಅಶ್ರಫ್ ಕಿರಾತ್ ಪಠಿಸಿದನು.

ಶಿಕ್ಷಕಿ ಮಮ್ರಾಜ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಹಾಡಿದರು.