ಜ.31 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಳ ಸಾಮೂಹಿಕ ವಿವಾಹ

0

ಕರ್ನಾಟಕ ಸರ್ಕಾರದ ಮಾಂಗಲ್ಯ ಭಾಗ್ಯ ಯೋಜನೆಯ ಸರಳ ಸಾಮೂಹಿಕ ವಿವಾಹ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಜ.31 ರಂದು ನಡೆಯಲಿದೆ.

ಅಂದು ಒಟ್ಟು 6 ಜೋಡಿ ಹಸೆಮಣೆ ಏರಲಿವೆ. ದೇವಸ್ಥಾನದಿಂದ ವಧುವಿಗೆ 10 ಸಾವಿರ, ಹಾಗೂ ವರನಿಗೆ 5000 ಪ್ರೋತ್ಸಾಹ ಧನ ಹಾಗೂ 40 ಸಾವಿರ ರುಪಾಯಿಯಲ್ಲಿ ವಧುವಿಗೆ ತಾಳಿ ಹಾಗೂ ಚಿನ್ನದ ಗುಂಡು ಕೊಡುವ ವ್ಯವಸ್ಥೆ ಇದೆ.