ಹಿರಿಯರ ಕ್ರೀಡಾಕೂಟದಲ್ಲಿ ದಮಯಂತಿ ಮುತ್ಲಾಜೆ (ಬೊಳ್ಳೂರು) ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಮಂಗಳೂರಿನಲ್ಲಿ ಜ.13 ಮತ್ತು ಜ.14 ರಂದು ನಡೆದ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಏನೆಕಲ್ಲು ನಿವಾಸಿ ದಮಯಂತಿ ಮುತ್ಲಾಜೆ(ಬೊಳ್ಳೂರು) ಇವರು 800 ಮೀಟರ್‌, 400 ಮೀಟರ್‌ ಓಟದಲ್ಲಿ ಪ್ರಥಮ ಸ್ಥಾನ ಹಾಗೂ 200 ಮೀಟರ್‌ ಮತ್ತು 1500 ಮೀ‌ಟರ್ ಓಟದಲ್ಲಿ ತೃತೀಯ ಸ್ಥಾನ ಹಾಗೂ ‌ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಕಳೆದ ಹಲವು‌ ವರ್ಷಗಳಿಂದ‌ ಹಿರಿಯರ ಕ್ರೀಡಾಕೂಟದಲ್ಲಿ ಇವರು ಭಾಗವಹಿಸುತ್ತಿದ್ದು,
ಏನೆಕಲ್ಲು ಗ್ರಾಮದ ಮುತ್ಲಾಜೆ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ.