ಸಪ್ತಪದಿ ತುಳಿದ ಆರು ಜೋಡಿ
ಸಾಕ್ಷಿಯಾದ ಆಡಳಿತ ಮಂಡಳಿ, ಅಧಿಕಾರಿಗಳು, ಬಂಧುಗಳು
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಳ ಸಾಮೂಹಿಕ ವಿವಾಹ ಜ.31 ರಂದು ನಡೆಯಿತು.
ಆದಿ ಸುಬ್ರಹ್ಮಣ್ಯ ದ ಸಭಾಭವನದಲ್ಲಿ ನಡೆದ ಈ ವಿವಾಹ ಕಾರ್ಯುಕ್ರಮದಲ್ಲಿ ಒಟ್ಟು 6 ಜೋಡಿ ಸಪ್ತಪದಿ ತುಳಿದರು. ವರನಿಗೆ 5 ಸಾವಿರ, ವಧುವಿಗೆ 10 ಸಾವಿರ ಪ್ರೋತ್ಸಾಹ ಧನ ಹಾಗೂ 40 ಸಾವಿರ ರುಪಾಯಿಯಲ್ಲಿ ವಧುವಿಗೆ ತಾಳಿ ಹಾಗೂ ಚಿನ್ನದ ಗುಂಡು ಕೊಡುವ ವ್ಯವಸ್ಥೆ ಮಾಡಲಾಯಿತು.
ಅರ್ಚಕರುಗಳ ಮದುವೆಯ ವಿಧಿವಿಧಾನಗಳನ್ನು ಪೂರೈಸಿದರು. ಆಡಳಿತ ಮಂಡಳಿ, ಅಧಿಕಾರಿ ವರ್ಗ ಮಾಂಗಲ್ಯ ಹಸ್ತಾಂತರಿಸಿತು. ನೂತನ ದಂಪತಿಗಳನ್ನು ದೇವಸ್ಥಾನ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಸದಸ್ಯರುಗಳಾದ ಪಿ.ಜಿ.ಎಸ್. ಎನ್. ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ವನಜಾ ಭಟ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಸಹಾಯಕ ಕಾರ್ಯನಿರ್ವಣಾಧಿಕಾರಿ ರಾಜಣ್ಣ, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶಿವ ಸುಬ್ರಹ್ಮಣ್ಯ ಭಟ್, ಮಾಜಿ ತಾ.ಪಂ ಸದಸ್ಯರಾದ ಅಶೋಕ್ ನೆಕ್ರಾಜೆ ಮತ್ತಿತರರು ಹಾಜರಿದ್ದರು.