ಸುಬ್ರಹ್ಮಣ್ಯಕ್ಕೆ ಅಗತ್ಯವಿರುವ ಮಾದರಿ ಪಾರ್ಲರ್ : ರಾಜೀವಿ ರೈ
ಸುಬ್ರಹ್ಮಣ್ಯದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮೋಚನಾ ಬ್ಯೂಟಿ ಪಾರ್ಲರ್ ಕೆ.ಎಸ್.ಆರ್.ಟಿ ಬಸ್ ನಿಲ್ದಾಣದ ಎದುರುಗಡೆ ನಂದಶ್ರೀ ಕಾಂಪ್ಲೆಕ್ಸ್ ನಲ್ಲಿ, ಜ.31 ರಂದು ಶುಭಾರಂಭಗೊಂಡಿತು.
ಮಹಿಳಾ ವಿವಿದೋದ್ದೇಶ ಸಂಘ ಸುಬ್ರಹ್ಮಣ್ಯ ಇದರ ಅಧ್ಯಕ್ಷೆ ರಾಜೀವಿ ಆರ್ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸುಬ್ರಹ್ಮಣ್ಯಕ್ಕೆ ಅಗತ್ಯವಿರುವ ಮಾದರಿ ಪಾರ್ಲರ್ ನ್ನು ಪಾವನ ದಾಮೋದರ್ ಇಲ್ಲಿ ನಿರ್ಮಿಸಿದ್ದಾರೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಇರುವಂತಹ ವ್ಯವಸ್ಥೆ ಹೊಂದಿರುವ ಪಾರ್ಲರ್ ಇದು ಈಗಿನ ಕಾಲದ ಅವಶ್ಯಕತೆ. ಅವರ ಬದ್ದತೆ ಇದನ್ನು ಬೆಳೆಸಿದೆ. ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ದುಡಿಮೆಗೆ ಎಷ್ಟು ಅಗತ್ಯವೋ ಮಹಿಳೆಯರ ಪರ್ಸನಲ್ ಲೈಪ್ ಕೂಡ ಅಷ್ಟೇ ಅಗತ್ಯವಾದದ್ದು ಅದರಲ್ಲಿ ಬ್ಯೂಟಿಶಿಯನ್ ಕೂಡ ಮಹತ್ವದ್ದು ಎಂದು ಎಸ್ ಎಸ್ ಪಿ ಯು ಕಾಲೇಜಿನ ಉಪನ್ಯಾಸಕಿ ರೇಖಾ ರಾಣಿ ವಿವರಿಸಿದರು.
ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರಾದ ರಾಜೇಶ್ ಎನ್ ಎಸ್, ಸ್ಥಳೀಯರಾದ ಶ್ರೀಮತಿ ಲತಾ ಸರ್ವೇಶ್ವರ ಭಟ್, ಇಝೀ ಬಜಾರ್ ನ ವರ್ಷಾ ಕಾಮತ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಥಮ ಧರ್ಜೆ ಸಹಾಯಕಿ ಶ್ರೀಮತಿ ರಾಜಲಕ್ಷ್ಮಿ ಶೆಟ್ಟಿಗಾರ್, ಶ್ರೀಮತಿ ಗೀತಾ ರವಿ ಕಕ್ಕೆಪದವು ಅತಿಥಿಗಳಾಗಿ ಭಾಗವಹಿಸಿದ್ದರು. ಲೋಕೇಶ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಸ್ಥಳೀಯ ಗಣ್ಯರು, ಬಂಧುಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೋಚನಾದಲ್ಲಿ ಇಲ್ಲಿ ವಿವಿಧ ರೀತಿಯ ಕೇಶವಿನ್ಯಾಸ, ಹೇರ್ ಕಲರಿಂಗ್, ವ್ಯಾಕ್ಸ್, ಫೇಶಿಯಲ್, ಪಿಂಪಲ್ ಫೇಶಿಯಲ್, ಬ್ಲಿಚ್, ಮೆನಿಕ್ಯೂರ್, ಪೆಡಿಕ್ಯೂರ್, ಸ್ಪಾಟೀಟ್‌ಮೆಂಟ್, ಹೇರ್ ಸ್ಟೈಟಿಂಗ್, ಮದುಮಗಳ ಶೃಂಗಾರ ಮುಂತಾದ ಸೇವೆಗಳು ಮಿತ ದರದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರಾದ ಪಾವನಾ ದಾಮೋದರ್ ತಿಳಿಸಿದ್ದಾರೆ.