ಪಂಜ:’ಸೋಮವಾರದ ಪೂಜೆ” ತುಳು ಭಕ್ತಿಗೀತೆ ಬಿಡುಗಡೆ

0

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವರ ‘ಸೋಮವಾರದ ಪೂಜೆ’ ಸಾವಿರ ಸೀಮೆದ ಒಡೆಯಗ್ ಎಂಬ ತುಳು ಭಕ್ತಿ ಗೀತೆ ಬಿಡುಗಡೆ ಕಾರ್ಯಕ್ರಮ ಫೆ.3 ರಂದು ದೇವಳದಲ್ಲಿ ನಡೆಯಿತು.

ದೇವಳದ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.


ಭಕ್ತಿ ಗೀತೆಯನ್ನು ಗಾಯಕಿ ಸುಮಾ ಕೋಟೆ ಪಂಜ ಹಾಡಿದ್ದಾರೆ.
ಸಾಹಿತಿ ಪಂಚವರ್ಣ ಖ್ಯಾತಿಯ ರಕ್ಷಿತ್ ಮಂಚಿಕಟ್ಟೆ,ಛಾಯಾಗ್ರಹಣ ಮತ್ತು ಸಂಕಲನ ಮಾಡಿದ ಚೇತನ್ ಚಳ್ಳಕೋಡಿ,ನಿರ್ಮಾಪಕ ಶರತ್ ಪೂಜಾರಿ ಹೊಸ್ಮಠ ಕಡಬ , ಹಾಗೂ ಮಹೇಶ್ ಕೋಟೆ, ಶ್ರೀಮತಿ ‌ಸುವರ್ಣ ಎಂ ಕೋಟೆ, ದೇವಳದ ಅರ್ಚಕ ನರೇಶ್ ಭಟ್ , ಮನು ಯಂ ತೊಂಡಚ್ಚನ್ ಮೊದಲಾದವರು ಉಪಸ್ಥಿತರಿದ್ದರು.

ಕಬಕ ಶ್ರೀರಾಜ್ ಮ್ಯೂಸಿಕಲ್ ವಲ್ಡ್ ಮಿಥುನ್ ರಾಜ್ ವಿದ್ಯಾಪುರ ಸಂಗೀತ ಮತ್ತು ಧ್ವನಿ ಮುದ್ರಿಸಿದ್ದಾರೆ.

ಆ ಪ್ರಯುಕ್ತ ಮುಂಜಾನೆ ದೇವಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ತಂಡವನ್ನು ಶಾಲು ಹೊದಿಸಿ ಗೌರವಿಸಿದರು. ಸಚಿತ್ ಕಲ್ಮಡ್ಕ ಪ್ರಾಸ್ತಾವಿಕಗೈದರು.