ಕೆರೆಮೂಲೆ : ಹಿಮ್ಮುಖವಾಗಿ ಚಲಿಸಿ ಮಹಿಳೆ ಮತ್ತು ಗೋಡೆಗೆ ಡಿಕ್ಕಿ ಹೊಡೆದ ನ್ಯಾನೋ ಕಾರು

0

ಕೆರೆಮೂಲೆಯಿಂದ ರಥಬೀದಿಗೆ ಸಂಪರ್ಕಿಸುವ ರಸ್ತೆಯಲ್ಲಿ ಇಳಿಜಾರು ಪ್ರದೇಶದಲ್ಲಿ ನ್ಯಾನೋ ಕಾರು ಹಿಮ್ಮುಖವಾಗಿ ಚಲಿಸಿ ರಸ್ತೆಯಲ್ಲಿ ಬರುತ್ತಿದ್ದ ಮಹಿಳೆ ಮತ್ತು ಕೆಳಭಾಗದಲ್ಲಿದ್ದ ಮನೆಯೊಂದರ ಕಂಪೌಂಡಿಗೆ ಡಿಕ್ಕಿ ಹೊಡೆದ ಘಟನೆ ಇದೀಗ ಸಂಭವಿಸಿದೆ.
ಘಟನೆಯಿಂದ ಓರ್ವ ಮಹಿಳೆಗೆ ಗಾಯವಾಗಿದ್ದು ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ಆಟೋದಲ್ಲಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.