ಪಂಜ ಸೀಮೆ ದೇವಳದಲ್ಲಿ ವರ್ಷಾವಧಿ ಜಾತ್ರೋತ್ಸವ ಸಂಭ್ರಮ

0

ಪಂಜ ಸೀಮೆ ದೇವಾಲಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯುತಿದ್ದು.ಫೆ.5 ರಂದು ರಾತ್ರಿ ದೀಪೋತ್ಸವ , ಮಹಾಪೂಜೆ ,ಶ್ರೀ ದೇವರ ಬಲಿ ಹೊರಟು ವಸಂತಕಟ್ಟೆ ಪೂಜೆ, ಶಿರಾಡಿ ,ರುದ್ರ ಚಾಮುಂಡಿ ಮತ್ತು ಕಾಚುಕುಜುಂಬ ದೈವಗಳ ನರ್ತನ ಸೇವೆ ನಡೆಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ರವರಿಂದ ಕಾರುಣ್ಯಾಂಬುಧಿ ಶ್ರೀ ರಾಮ ಯಕ್ಷಗಾನ ಬಯಲಾಟ ಪ್ರದರ್ಶನ ಗೊಂಡಿತು.

ಫೆ.6.ರಂದು ಮುಂಜಾನೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಹಾಪೂಜೆ .ರಾತ್ರಿ ಗಂಟೆ 9.30 ಕ್ಕೆ ಶ್ರೀ ದೇವರ ಬ್ರಹ್ಮರಥೋತ್ಸವ, ಕಾಜು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ,ಶ್ರೀ ಭೂತಬಲಿ ,ಶಯನೋತ್ಸವ, ಕವಟ ಬಂಧನ ಜರುಗಲಿದೆ.


ಬ್ರಹ್ಮ ರಥೋತ್ಸವದಂದು ರಥ ಬೀದಿಯಲ್ಲಿ ರಾತ್ರಿ ಗಂಟೆ 8, ರಿಂದ ರಾಜ್ಯ ಪ್ರಶಸ್ತಿ ವಿಜೇತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದಿಂದ ಕೀಲು ಕುದುರೆ, ಕರಗ ನೃತ್ಯ, ಗೊಂಬೆ ನೃತ್ಯ ಪ್ರದರ್ಶನ ಗೊಳ್ಳಲಿದೆ. ಸಂಜೆ ಅನೇಕ ಭಜನಾ ತಂಡಗಳಿಂದ ರಥ ಬೀದಿಯಲ್ಲಿ ಕುಣಿತ,ಭಜನೆ ಭಜನಾ ಸಂಕೀರ್ತನೆ ನಡೆಯಲಿದೆ.

ಫೆ.7.ರಂದು ಕವಾಟೋದ್ಜಾಟನೆ ದೇವರಿಗೆ ಅಭಿಷೇಕ . ಬೆಳಿಗ್ಗೆ ಗಂಟೆ 9 ರಿಂದ ಬಲಿ ಹೊರಟು ಅವಭೃತ ಸ್ನಾನ ,ಧ್ವಜಾವರೋಹಣ , ಮಹಾಪೂಜೆ ಜರುಗಲಿದೆ.
ಸಂಜೆ ದೇಗುಲದಿಂದ ಶ್ರೀ ಕಾಚುಕುಜುಂಬ, ಉಳ್ಳಾಕುಲು ದೈವಗಳ ಭಂಡಾರ ವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿ ಬೈಲಿಗೆ ಹೋಗಿ ಧ್ವಜಾರೋಹಣ , ಶ್ರೀ ಕಾಚುಕುಜುಂಬ ದೈವದ ನೇಮ ಜರುಗಲಿದೆ.

ಫೆ.8 ರಂದು ಮುಂಜಾನೆ ಗರಡಿ ಬೈಲಿನ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಹಾಗೂ ಶ್ರೀ ಉಳ್ಳಾಕುಲು ದೈವದ ನೇಮ ,ಪ್ರಸಾದ ವಿತರಣೆ , ಧ್ವಜಾವರೋಹಣ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ ,ಮಹಾಪೂಜೆ ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ಜರುಗಲಿದೆ. ರಾತ್ರಿ ಶಿರಾಡಿ ದೈವದ ಬಂಡಾರ ಬರುವುದು.ಫೆ.9.ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ಜರುಗಲಿದೆ.

ಫೆ.22 ರಂದು ರಾತ್ರಿ ರಂಗ ಪೂಜೆ ಬೀದಿ ನೇಮ,ಫೆ.23 ರಂದು ಆದಿಬೈದೆರುಗಳ ನೇಮೋತ್ಸವ ಜರುಗಲಿದೆ. ಪ್ರತಿ ದಿನ ದೇವಳದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.