ಇಂದು ರಾತ್ರಿ ಪಂಜ ಪಂಚಲಿಂಗೇಶ್ವರ ಬ್ರಹ್ಮ ರಥೋತ್ಸವ

0

ಪಂಜ ಸೀಮೆ ದೇವಾಲಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ ಬ್ರಹ್ಮರಥೋತ್ಸವ ಇಂದು ರಾತ್ರಿ ನಡೆಯಲಿದೆ. ಇಂದು ಕೂಡ ಸುದ್ದಿ ಚಾನೆಲ್ ನಲ್ಲಿ ನೇರ ಪ್ರಸಾರ ಇರುತ್ತದೆ. ನಿನ್ನೆ ಶ್ರೀ ದೇವರ ದರ್ಶನ ಬಲಿ ಉತ್ಸವ ಕೂಡ ಮುಂಜಾನೆಯಿಂದಲೇ ನೇರ ಪ್ರಸಾರ ಮಾಡಲಾಗಿತ್ತು.

ಬ್ರಹ್ಮ ರಥೋತ್ಸವದ ಆ ಪ್ರಯುಕ್ತ ಸಂಜೆ ಭಜನಾ ಸುಮಾರು 48 ತಂಡಗಳಿಂದ ಸುಮಾರು 600 ಭಜಕರಿಂದ ರಥ ಬೀದಿಯಲ್ಲಿ ಏಕಕಾಲದಲ್ಲಿ ಕುಣಿತ ಭಜನೆ, ಭಜನಾ ಸಂಕೀರ್ತನೆ
ಜರುಗಲಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದಿಂದ ಕೀಲು ಕುದುರೆ, ಕರಗನೃತ್ಯ, ಗೊಂಬೆಯಾಟ ಆಕರ್ಷಣೆಯಾಗಲಿದೆ.