ಹನುಮಾನಾಸನದಲ್ಲಿ 50 ನಿಮಿಷ 20 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ಅಕ್ಷಯ ಬಾಬ್ಲುಬೆಟ್ಟು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಮತ್ತು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಫೆ. 5 ರಂದು ಸಂತೃಪ್ತಿ ಸಭಾಭವನ ಏನೇಕಲ್ಲಿ ನಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ ಇದರ ಪದಾಧಿಕಾರಿ ಸುಂದರ ಗೌಡ, ಪ್ರಗತಿಪರ ಕೃಷಿಕ ರೇಗಪ್ಪ ಗೌಡ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಭವ್ಯ ಜೇನುಕೋಡಿ, ಏನೇಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ರತನ್ ಕಲ್ಕುದಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೇಕಲ್ಲು ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಿಕಾ, ಶಿಕ್ಷಕಿ ಶ್ರೀಮತಿ ಅಂಬಿಕಾ, ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
ಶಾಲಾ ಗುರುಗಳು ಶಾಲು ಹೊದಿಸಿ ಸನ್ಮಾನಿಸಿದರು. ಅಕ್ಷಯ ಬಾಬ್ಲುಬೆಟ್ಟು ಯೋಗ ಪ್ರದರ್ಶನ ನೀಡಿದರು.
ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೇಕಲ್ಲಿನಲ್ಲಿ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮೋಹನ್ ಮತ್ತು ಶ್ರೀಮತಿ ದಿವ್ಯರವರ ಪುತ್ರಿ. ನಿರಂತರ ಯೋಗ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆಯ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.