ಸುಳ್ಯ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಆರ್ಥಿಕ ಸಮಿತಿಯ ಸಭೆ

0

ಸುಳ್ಯ ಶ್ರೀ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಆರ್ಥಿಕ ಸಮಿತಿಯ ಸಭೆಯು ಮಂದಿರದಲ್ಲಿ ಫೆ.8 ರಂದು ನಡೆಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ರವರು ಈಗಾಗಲೇ ಉತ್ಸವದ ಸಿದ್ಧತೆಯ ವಿವರ ನೀಡಿದರು.
ಆರ್ಥಿಕ ಸಮಿತಿ ಸಂಚಾಲಕ ಅಶೋಕ ಪ್ರಭು ಆರ್ಥಿಕ ಕ್ರೋಢಿಕರಣ ಮಾಡುವ ಸಲುವಾಗಿ ತಂಡ ರಚಿಸಿ ದೇಣಿಗೆ ಸಂಗ್ರಹಿಸಲು ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.
ಮಂದಿರದ ಆಡಳಿತ ಧರ್ಮದರ್ಶಿ ಕೆ.ಉಪೇಂದ್ರ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಹಾಗೂ ಧರ್ಮದರ್ಶಿ ಮಂಡಳಿಯ ಸದಸ್ಯರು, ಸಮಿತಿಯ ಪದಾಧಿಕಾರಿಗಳು, ಸಂಚಾಲಕರು ಮತ್ತಿತರರು ಉಪಸ್ಥಿತರಿದ್ದರು.