ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಪರ್ಲಿಕಜೆ ಅಂಗನವಾಡಿ ಕೇಂದ್ರಕ್ಕೆ ಜಾರುಬಂಡಿ ಕೊಡುಗೆ

0

ಐವರ್ನಾಡು ಗ್ರಾಮದ ಪರ್ಲಿಕಜೆ ಅಂಗನವಾಡಿ ಕೇಂದ್ರಕ್ಕೆ ರೋಟರಿ ಕ್ಲಬ್ ಬೆಳ್ಳಾರೆ ಇವರು ಅಂಗನವಾಡಿ ಮಕ್ಕಳಿಗೆ ಆಟ ಆಡಲು ಜಾರುಬಂಡಿಯನ್ನು ಕೊಡುಗೆ ಯಾಗಿ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಶಶಿಧರ್ ಬಿ.ಕೆ, ಕ್ಲಬ್ ನ ಝೋನ್ ಲೆಫ್ಟಿನೆಂಟ್ ಪದ್ಮನಾಭ ,ವಿನಯಕುಮಾರ್ ಎ ಜೆ, ಸದಸ್ಯರಾದ ಎ. ಕೆ. ಮಣಿಯಾಣಿ, ರವೀಂದ್ರ ಗೌಡ, ಬಾಲಕೃಷ್ಣ ಮಡ್ತಿಲ, ನವೀನ್ ರೈ, ಮೋನಪ್ಪ ಗೌಡ ಹಾಗೂ ಐವರ್ನಾಡು ಪಂಚಾಯತ್ ಸದಸ್ಯರಾದ ಸತೀಶ್ ಜಬಳೆ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ, ಮಕ್ಕಳ ಪೋಷಕರು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಉಪಸ್ಥಿತರಿದ್ದರು.