ಫೆ. 13-14: ಕುಕ್ಕೇಟಿ ಶ್ರೀ ಧರ್ಮದೈವ, ವಿಷ್ಣುಮೂರ್ತಿ ಧರ್ಮ ನಡಾವಳಿ

0

ಮಂಡೆಕೋಲು ಗ್ರಾಮದ ಕುಕ್ಕೇಟಿ ತರವಾಡು ಮನೆಯಲ್ಲಿ ಫೆಬ್ರವರಿ 13 ಮತ್ತು 14 ರಂದು ಶ್ರೀ ಧರ್ಮದೈವ, ಶ್ರೀ ವಿಷ್ಣುಮೂರ್ತಿ, ಶ್ರೀ ಮುನಿಸ್ವಾಮಿ ಹಾಗೂ ಉಪದೈವಗಳ ಧರ್ಮ ನಡಾವಳಿ ನಡೆಯಲಿದೆ. ಫೆಬ್ರವರಿ 13ರಂದು ಬೆಳಿಗ್ಗೆ ಗಂ.6:00 ರಿಂದ ಗಣಪತಿ ಹವನ, ನಾಗತಂಬಿಲ, ಮೂಲ ಸ್ಥಾನದಲ್ಲಿ ತಂಬಿಲ, ಶ್ರೀ ವೆಂಕಟರಮಣ ದೇವರ ಹರಿ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6:00ರಿಂದ ಶ್ರೀ ದೇವತೆ ದೈವದ ಕೋಲ, 7:30ರಿಂದ ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್, ಶ್ರೀ ರಕ್ತೇಶ್ವರಿ ದೈವದ ತೊಡಂಙಲ್, ರಾತ್ರಿ 9:30 ರಿಂದ ವರ್ಣಾರ ಪಂಜುರ್ಲಿ ದೈವ ಹಾಗೂ ಪೊಟ್ಟನ್ ದೈವಗಳ ಕೋಲ ನಡೆಯಲಿದೆ.
ಫೆಬ್ರವರಿ 14ರಂದು ಬೆಳಿಗ್ಗೆ 5:00 ಗಂಟೆಗೆ ಶ್ರೀ ರಕ್ತೇಶ್ವರಿ ದೈವದ ಕೋಲ 9:00 ರಿಂದ ಶ್ರೀ ಧರ್ಮದೈವ ಮತ್ತು ಶ್ರೀ ವಿಷ್ಣುಮೂರ್ತಿ ದೈವಗಳ ನಡಾವಳಿ ನಡೆಯಲಿದೆ. ಪ್ರಸಾದ ವಿತರಣೆಯ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ 3 ಗಂಟೆಯಿಂದ ಕುಪ್ಪೆ ಪಂಜುರ್ಲಿ ದೈವ, 4:30 ರಿಂದ ಪಾಷಾಣಮೂರ್ತಿ, ಕೊರತಿ, ಅಂಗಾರ, ಗುಳಿಗ ದೈವಗಳ ಕೋಲ ನಡೆಯುತ್ತದೆ ಎಂದು ಕುಟುಂಬದ ಯಜಮಾನ ಕುಕ್ಕೇಟಿ ಲಕ್ಷ್ಮಣ ಗೌಡ ತಿಳಿಸಿದ್ದಾರೆ.