ಭಕ್ತಿ,ಸಂಭ್ರಮದ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ

0

ಮನರಂಜಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಫೆ.10 ರಂದು ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ ಬಟ್ಟಲು ಕಾಣಿಕೆ

ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವವು ಭಕ್ತಿ,ಸಂಭ್ರಮದಿಂದ ನಡೆಯುತ್ತಿದ್ದು ಫೆ.8 ರಂದು ರಾತ್ರಿ ರಂಗಪೂಜೆಗಳು ನಡೆಯಿತು.
ದೇವಸ್ಥಾನದ ಸಭಾಂಗಣದಲ್ಲಿ ಬಾಂಜಿಕೋಡಿ ಅಂಗನವಾಡಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ,ದೇರಾಜೆ ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಐವರ್ನಾಡು ಸಂಜೀವಿನಿ ಸಂಘದ ಸದಸ್ಯೆಯರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ‌ ನಡೆಯಿತು.
ಜಿತೇಶ್ ಮ್ಯೂಸಿಕಲ್ಸ್ ಸಂಸ್ಥೆ ಸುಳ್ಯ ಇವರಿಂದ “ಕರೋಕೆ ಭಕ್ತಿಗಾನ ಸುಧೆ” ನಡೆಯಿತು.


ಗೆಳೆಯರ ಬಳಗ ದೇರಾಜೆ ಐವರ್ನಾಡು ಇವರ ಪ್ರಾಯೋಜಕತ್ವದಲ್ಲಿ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪುತ್ತೂರು ಇವರಿಂದ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಆಕರ್ಷಿಸಿದ್ದವು.