ಕಳಂಜ : ಗ್ರಾಮ ಸಭೆ

0

ಸೋಲಾರ್ ಬೀದಿ ದೀಪ, ಶಿಕ್ಷಕರ ಕೊರತೆ ಬಗ್ಗೆ ಚರ್ಚೆ

ಕಳಂಜ ಗ್ರಾ.ಪಂ ನ ಗ್ರಾಮ ಸಭೆ ಫೆ. 9 ನಡೆಯಿತು. ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ ಅಧ್ಯಕ್ಷತೆಯನ್ನು ನಡೆಯಿತು. ನೋಡೆಲ್ ಅಧಿಕಾರಿಯಾಗಿ ದೇವರಾಜ್ ಮುತ್ಲಾಜೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಲತಾ, ಗಣೇಶ್ ರೈ, ಪ್ರಶಾಂತ್ ಕುಮಾರ್ ಕಿಲಂಗೋಡಿ, ಶ್ರೀಮತಿ ಸುದಾ, ಶ್ರೀಮತಿ ಕಮಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ, ಕಾರ್ಯದರ್ಶಿ ಪದ್ಮಯ್ಯ ಉಪಸ್ಥಿತರಿದ್ದರು. ಪಿಡಿಒ ಗೀತಾ ಸ್ವಾಗತಿಸಿದರು.

ಪಂಚಾಯತ್ ಸಿಬ್ಬಂದಿ ಗಿರಿಧರ್ ಕಳಂಜ ವರದಿ ವಾಚಿಸಿದರು. ಪದ್ಮಯ್ಯ ಅವರು ವಂದಿಸಿದರು. ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಸಭೆಯಲ್ಲಿ ಸೋಲಾರ್ ಬೀದಿ ದೀಪಗಳು ಉರಿಯದ ಬಗ್ಗೆ, ಶಾಲೆಯಲ್ಲಿ ಶಿಕ್ಷಕರ ಕೊರತೆ, ಮುಖ್ಯವಾಗಿ ದೈಹಿಕ‌ ಶಿಕ್ಷಣ ಶಿಕ್ಷಕರ ಕೊರತೆ ಬಗ್ಗೆ, ನೀರಿನ ವ್ಯವಸ್ಥೆ, ರಸ್ತೆ ಬಗ್ಗೆ, ವಿದ್ಯುತ್ ಪರಿವರ್ತಕ ಬಗ್ಗೆ ಚರ್ಚೆ ನಡೆಯಿತು.

ಕಳಂಜ ಗ್ರಾ.ಪಂ ನ ಕೇಳಿಕೆ ಮೇರೆಗೆ ಕೋಟೆಮುಂಡುಗಾರು ಹಿ.ಪ್ರಾ.ಶಾಲೆ ಹಾಗೂ ಕಳಂಜ ಅಂಗನವಾಡಿ ಕೇಂದ್ರಕ್ಕೆ ಪುಸ್ತಕ ಇಡುವ ಕಪಾಟನ್ನು ಬ್ಯಾಂಕ್ ಆಫ್ ಬರೋಡಾ ದವರು ಕೊಡುಗೆಯಾಗಿ ನೀಡಿದ್ದು ಅದನ್ನು ಸಭೆಯಲ್ಲಿ ಹಸ್ತಾಂತರಿಸಲಾಯಿತು.