ಸುಬ್ರಹ್ಮಣ್ಯದಲ್ಲಿ ಡಿಜಿಟಲ್ ಹಾಗೂ ಬಿಕನ್ ಲೈಬ್ರರಿ ಉದ್ಘಾಟನೆ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆವರಣದಲ್ಲಿ ಕಡಬ ತಾಲೂಕಿನ ಪ್ರಥಮ ಡಿಜಿಟಲ್ ಹಾಗೂ ಬಿಕನ್ ಲೈಬ್ರರಿ ಯನ್ನು ಫೆ.8 ರಂದು ಏನೆಕಲ್ ಪೂಜಾರಿ ಮನೆ ವಿಶೇಷ ಚೇತನ ಶಮನ್ ಕುಮಾರ್ ಅವರು ಉದ್ಘಾಟನೆಗೊಳಿಸಿದರು . ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ಅವರು ಮಾತನಾಡಿ ಕರ್ನಾಟಕ ರಾಜ್ಯದ 5623 ಗ್ರಾಮ ಪಂಚಾಯತ್ ಗಳಲ್ಲಿ ತಾಲೂಕಿಗೆ ಒಂದರಂತೆ ಡಿಜಿಟಲ್ ಹಾಗೂ ಭೀಕನ್ ಗ್ರಾಮ ಪಂಚಾಯಿತಿಗಳಾಗಿ ಮಾರ್ಪಾಡು ಮಾಡಿದ್ದು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅನ್ನು ಆಯ್ಕೆ ಮಾಡಲಾಗಿದೆ .

ಇದರ ಉದ್ದೇಶ ಗ್ರಾಮೀಣ ಯುವಕ ಯುವತಿಯರಿಗೆ ಹಾಗೂ ಸಾರ್ವಜನಿಕರಿಗೆ ಎಲ್ಲಾ ಮಾಹಿತಿಗಳು ಗ್ರಂಥಾಲಯದ ಮೂಲಕ ನೀಡಬೇಕು, ಹಾಗೂ ಹೆಚ್ಚೆಚ್ಚು ಜನರು ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಓದಬೇಕು, ಹಾಗೂ ಡಿಜಿಟಲ್ ಕಂಪ್ಯೂಟರ್ ಜ್ಞಾನವನ್ನು ಪಡೆಯಬೇಕು ಎಂಬುದಾಗಿದೆ ,ಅದರೊಂದಿಗೆ ವಿಶೇಷ ಚೇತನ ಮಕ್ಕಳಿಗೆ ಕೂಡ ಪ್ರತ್ಯೇಕ ಕಂಪ್ಯೂಟರ್ ವ್ಯವಸ್ಥೆಯನ್ನು ಕೂಡ ವ್ಯವಸ್ಥೆ ಮಾಡಲಾಗಿದೆ ಎಂದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಕಲ್ಲಾಜೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆಂಕಟೇಶ ಎಚ್ ಎಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ ಜೆ.ಎನ್, ಲೈಬ್ರರಿಯನ್ ಲಲಿತ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಗ್ರಾಮ ಪಂಚಾಯತ್ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ,ವಿವಿಧ ಸ್ವಸಹಾಯ ಗುಂಪಿನ ಅಧ್ಯಕ್ಷ ಹಾಗೂ ಸರ್ವ ಸದಸ್ಯರುಗಳು, ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಮೋನಪ್ಪ ಡಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯ ಗಿರೀಶ್ ಸ್ವಾಗತಿಸಿದರು. ಪಂಚಾಯತ್ ಸದಸ್ಯೆ ಭಾರತಿ ದಿನೇಶ್ ಧನ್ಯವಾದ ಸಮರ್ಪಿಸಿದರು. ಕಣ್ಣು ಕಾಣದವರಿಗೆ ವಿಶೇಷವಾಗಿ ಶಬ್ದದ ವ್ಯವಸ್ಥೆ ಮುಖಾಂತರ ಕಲಿಕೆಗೆ ವ್ಯವಸ್ಥೆ (ಬೀಕನ್) ಇದೆ.