ಜನ್ಮ ನೀಡಿದ ತಂದೆ – ತಾಯಿಗೆ ನನ್ನ ನಮನ

0

ಕು.ನಿರೀಕ್ಷಾ ಸುಲಾಯ ಎಂ

ನನ್ನ ಜನನ ತಾಯಿಗೆ ಖುಷಿ ತಂದಿತು
ತಂದೆ ಮೊಗದಲ್ಲಿ ಸಂತೋಷ ಮೂಡಿತು
ನನ್ನ ತಪ್ಪು ಸರಿಗಳನ್ನು ತಿದ್ದುತಾ
ಭವಿಷ್ಯವನ್ನು ಇಬ್ಬರೂ ಸೇರಿ ರೂಪಿಸುತ್ತಾ

ನನನಗೆ ಎರಡುಇ ಅಕ್ಷರ ಕಲಿಸುತ್ತಾ
ನನ್ನ ಕನಸು ನನಸು ಮಾಡಲು ದುಡಿಯುತ್ತಾ
ಕಷ್ಟ ನಷ್ಟಗಳಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಾ
ಸಂತೋಷದ ಕ್ಷಣಗಳನ್ನು ನನ್ನೊಂದಿಗೆ ಹಂಚುತ್ತಾ

ನನ್ನ ಆಟ ಪಾಠಗಳಲ್ಲಿ ಹುರಿದುಂಬಿಸಿ
ನನ್ನನ್ನು ಮತ್ತಷ್ಟು ಮನರಂಜಿಸಿ
ನಾನು ಹೇಳಿದ್ದನ್ನು ಎಲ್ಲಾ ಕೊಡಿಸಿ
ಪ್ರತೀ ಕ್ಷಣ ನನ್ನನ್ನು ಸಂತೈಸಿ

ತಂದೆ ತಾಯಿ ಪಾತ್ರ ನನ್ನ ಜೀವನದಲ್ಲಿ
ಮರೆಯಲು ಸಾಧ್ಯವಿಲ್ಲ ಇನ್ನು ಏಳು ಏಳು ಜನ್ಮಗಳಲ್ಲಿ
ತಂದೆ ತಾಯಿಯ ಮುಂದೆ ಎಲ್ಲವೂ ಶೂನ್ಯ
ನನ್ನ ಜೀವನದಲ್ಲಿ ಇದುವೆಲ್ಲಾ ಸಾಧ್ಯ

ಕು.ನಿರೀಕ್ಷಾ ಸುಲಾಯ ಯಂ
೯ನೇ ತರಗತಿ
ರೋಟರಿ ವಿದ್ಯಾಸಂಸ್ಥೆ ಸುಳ್ಯ