ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಸಂಕ್ರಮಣ ಪೂಜೆ ಹಾಗೂ ದುರ್ಗಾಪೂಜೆ

0

ಎಂಡಿಎಸ್ ನಲ್ಲಿ ಚಿನ್ನದ ಪದಕ ವಿಜೇತ ಡಾ. ಸಂದೀಪ್ ಬಿರ್ಮುಕಜೆ ಸೇರಿದಂತೆ ಮೂವರಿಗೆ ಸನ್ಮಾನ

ಕುಂಭ ಸಂಕ್ರಮಣದ ಪ್ರಯುಕ್ತ
ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಸಂಕ್ರಮಣ ಪೂಜೆ ಹಾಗೂ ದುರ್ಗಾಪೂಜೆ ಫೆ. 13 ರಂದು ನಡೆಯಿತು.

ಪ್ರಾತಃ ಕಾಲ ಗಣಪತಿ ಹವನ, ಸಂಜೆ ಅಯ್ಯಪ್ಪ ವೃತಾಧಾರಿಗಳಿಂದ ದೀಪಾರಾಧನೆ ನಡೆಯಿತು.

ಭಜನಾ ಸೇವೆಯನ್ನು ಶ್ರೀ ಚಾಮುಂಡೇಶ್ವರಿ ಭಜನಾ ಸಂಘ ಕೊರತ್ತೋಡಿ, ನೆಲ್ಲೂರು-ಕೆಮ್ರಾಜೆ ಸುಳ್ಯ ಇದರ ಸದಸ್ಯರುಗಳು ನಡೆಸಿಕೊಟ್ಟರು.

ವಾಮನ ಕುಲಾಲ್ ಹಾಗೂ ದೇವದಾಸ್ ಉಪ್ಪಿನಂಗಡಿ ಇವರ ಸೇವಾ ಬಾಬ್ತು ದುರ್ಗಾಪೂಜಾ ಕಾರ್ಯಕ್ರಮವು ನಡೆಯಿತು.

ನಂತರ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಶ್ರೀದೇವರ ಪ್ರಸಾದ ವಿತರಣಾ ಕಾರ್ಯಕ್ರಮವು ನಡೆಯಿತು.

ಸಾಧಕರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದಿಂದ ಎಂಡಿಎಸ್ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರಾಂಕ್ ಪಡೆದು ಚಿನ್ನದ ಪದಕ ವಿಜೇತರಾದ ಕೆವಿಜಿ ಡೆಂಟಲ್ ಕಾಲೇಜಿನ ಹಿರಿಯ ಉಪನ್ಯಾಸಕ ಡಾ. ಸಂದೀಪ್ ಬಿರ್ಮುಕಜೆ, ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಮೇಶ್ ಅಡ್ಪಂಗಾಯ, ನಿವೃತ್ತ ಯೋಧ ವಾಮನ ಉಪ್ಪಿನಂಗಡಿ ಯವರನ್ನು ಕ್ಷೇತ್ರದ ಧರ್ಮದರ್ಶಿ ಶಿವಪ್ರಕಾಶ್
ಅಡ್ಪಂಗಾಯ ರವರು ಸನ್ಮಾನಿಸಿ ಗೌರವಿಸಿದರು.