ಗುತ್ತಿಗಾರು ಗ್ರಾ.ಪಂ ನ ಗ್ರಾಮ ಸಭೆ

0

ಚರಂಡಿಯಲ್ಲಿ ತ್ಯಾಜ್ಯ ನೀರು, ನಾಲ್ಕೂರು ಗ್ರಾಮ ಆಢಳಿತಾಧಿಕಾರಿಯಲ್ಲಿ ಕಛೇರಿ ಸೇವೆಯ ಅಲಭ್ಯತೆ, ಜೆ.ಜೆ. ಎಂ ನೀರಿನ ವ್ಯವಸ್ಥೆ ಬಗ್ಗೆ ಚರ್ಚೆ

ಗುತ್ತಿಗಾರು ಗ್ರಾ.ಪಂ ನ ಗ್ರಾಮ ಸಭೆ ಫೆ.14 ರಂದು ಗ್ರಾ.ಪಂ ನ ಪ.ವರ್ಗದ ಸಭಾಂಗಣದಲ್ಲಿ ನಡೆಯಿತು.

ಗುತ್ತಿಗಾರಿನ ಪೇಟೆಯ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವ ಬಗ್ಗೆ, ನಾಲ್ಕೂರು ಗ್ರಾಮ ಆಢಳಿತಾಧಿಕಾರಿಯಲ್ಲಿ ಕಛೇರಿ ಸೇವೆಯ ಅಲಭ್ಯತೆ, ಗ್ರಾಮ ಪಂಚಾಯತ್ ವ್ಯಾಪ್ತಿಯ ಜೆ.ಜೆ. ಎಂ ನೀರಿನ ವ್ಯವಸ್ಥೆ ಬಗ್ಗೆ , ಬಾಕಿಲದಲ್ಲಿ ನಡೆಯುವ ರಸ್ತೆ ಅಪಘಾತ ಬಗ್ಗೆ ಚರ್ಚೆ ನಡೆಯಿತು.

ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಶ್ರೀಮತಿ ಸುಮಿತ್ರಾ ಮೂಕಮಲೆ ವಹಿಸಿದ್ದರು. ನೊಡೆಲ್ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಶ್ರೀಮತಿ ಸುಹಾನ ಇದ್ದರು. ವೇದಿಕೆಯಲ್ಲಿ ಪಿಡಿಒ ಧನಪತಿ, ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಸಾಲ್ತಾಡಿ, ಗ್ರಾ.ಪಂ ಸದಸ್ಯರುಗಳಾದ ವಿಜಯ ಕುಮಾರ್ ಚಾರ್ಮತ, ಹರೀಶ್ ಕೊಯಿಲ, ಜಗದೀಶ್ ಬಾಕಿಲ, ಶ್ರೀಮತಿ ಲತಾ ಕುಮಾರಿ ಆಜಡ್ಕ, ಶ್ರೀಮತಿ ಶಾರದಾ ಮುತ್ಲಾಜೆ, ರೇವತಿ ಆಚಳ್ಳಿ, ಶ್ರೀಮತಿ ಮಂಜುಳಾ ಮುತ್ಲಾಜೆ, ಶ್ರೀಮತಿ ಅನಿತಾ ಕುಮಾರಿ, ಶ್ರೀಮತಿ ಲೀಲಾವತಿ ಅಂಜೇರಿ, ಪ್ರಮೀಳಾ ಎರ್ದಡ್ಕ ಉಪಸ್ಥಿತರಿದ್ದರು.

ಶ್ರೀಮತಿ ಭಾರತಿ ಸ್ವಾಗತಿಸಿದರು. ವಿಜಯ ಕುಮಾರ್ ಚಾರ್ಮತ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಅನಿತಾ ಬಿ ವರದಿ ವಾಚಿಸಿದರು. ಶ್ರೀಮತಿ ಶಾರದಾ ಮುತ್ಲಾಜೆ ವಂದನಾರ್ಪಣೆ ಮಾಡಿದರು. ಶ್ರೀಮತಿ ತೇಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್, ಚೋಮಯ್ಯ ಸಹಕರಿಸಿದರು.