ಫೆ.15 – 16 : ಕೊಲ್ಲಮೊಗ್ರು ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ ಉತ್ಸವ

0

ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಗಡಿಕಲ್ಲು ಕೊಲ್ಲಮೊಗ್ರು ಇಲ್ಲಿ ಫೆ.15 ಮತ್ತು ಫೆ. 16 ರಂದು ಶ್ರೀ ಮಹಾವಿಷ್ಣುಮೂರ್ತಿ
ಒತ್ತೆಕೋಲ ಉತ್ಸವ ನಡೆಯಲಿದೆ.
ಫೆ. 13 ಸಂಕ್ರಮಣ ಪೂಜೆ. ಫೆ. 15 ಪ್ರಾತಃಕಾಲ 5-00 ಅಗ್ನಿಕುಂಡ ಜೋಡಣೆ ಪ್ರಾರಂಭವಾಗಲಿದೆ. ಬೆಳಿಗ್ಗೆ ಗಣಪತಿಹೋಮ, ಬಳಿಕ ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6-00ಕ್ಕೆ ಸ್ಥಾನದಿಂದ ಭಂಡಾರ ತೆಗೆಯಲಾಗುವುದು. ಬಳಿಕ ತೊಡಂಙಲ್, ರಾತ್ರಿ ಗಂಟೆ 7-00 ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ. ರಾತ್ರಿ 8-00ರಿಂದ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ ಅನ್ನಸಂತರ್ಪಣೆ ನಡೆದು 11-00ರಿಂದ ಶ್ರೀ ದೈವದ ಕುಳ್ಚಾಟ, ನಡೆದು ಶ್ರೀ ಮಯೂರ ನಾಟಕ ಕಲಾ ತಂಡ ಕೊಲ್ಲಮೊಗ್ರು ಇವರಿಂದ ತುಳು ಹಾಸ್ಯಮಯ ನಾಟಕ “ಪಣಿಯರ ಆಪುಜಿ” ನಡೆಯಲಿದೆ.
ಫೆ. 16 ರ ಬೆಳಗ್ಗೆ ಗಂಟೆ 4-30ಕ್ಕೆ ಶ್ರೀ ದೈವದ ಅಗ್ನಿ ಪ್ರವೇಶ, ಬಳಿಕ ಶ್ರೀ ದೈವದ ಬಾರಣೆ, ಬಳಿಕ ಮಾರಿಕಳ, ಗುಳಿಗ ನೇಮ, ಪ್ರಸಾದ ವಿತರಣೆ ನಡೆಯಲಿದೆ.