ಅರಂಬೂರು: ಭಜನಾ ಮಂದಿರದ ಸುವರ್ಣ ಮಹೋತ್ಸವಕ್ಕೆ ಮೆರುಗು ನೀಡಿದ ಆಕರ್ಷಕ ನೃತ್ಯ ಭಜನಾ ಮೆರವಣಿಗೆ

0

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವದ ಪ್ರಯುಕ್ತ ಫೆ.14 ರಂದು ಸಂಜೆ ಸರಳಿಕುಂಜ ಗಣೇಶ್ ಇಂಡಸ್ಟ್ರೀಸ್ ಬಳಿಯಿಂದ ಅದ್ದೂರಿಯ ಕುಣಿತ ಭಜನಾ ಮೆರವಣಿಗೆಯು ಆರಂಭಗೊಂಡಿತು.
ಕಾರ್ಯಾಧ್ಯಕ್ಷ ಕೃಷ್ಣಪ್ಪ ಕೆದಂಬಾಡಿ ಹಾಗೂ ಕಾರ್ಯದರ್ಶಿ ಬಂಗಾರು ಭಾರದ್ವಾಜ್ ಮೆರವಣಿಗೆಗೆ ಚಾಲನೆ ನೀಡಿದರು.


ಮೆರವಣಿಗೆಯಲ್ಲಿ ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಯವರು ಸಾಗಿ ಬಂದರು.
ಬಳಿಕ ಮಂದಿರದ ಮುಂಭಾಗದಲ್ಲಿ ತಾಲೂಕಿನ ಭಜನಾ ತಂಡಗಳ ಸದಸ್ಯರಿಂದ ಆಕರ್ಷಕವಾಗಿ
ಕುಣಿತ ಭಜನೆಯ ಪ್ರದರ್ಶನವಾಯಿತು.
ಮೆರವಣಿಗೆಯಲ್ಲಿ ಬಂದ ಎಲ್ಲಾ ಭಕ್ತಾದಿಗಳಿಗೆ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ರವರ ಕಾರ್ಖಾನೆ ಬಳಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮೆರವಣಿಗೆಯಲ್ಲಿ ಸಾಗಿದರು.