ಐವರ್ನಾಡು : ಸಂವಿಧಾನ ಜಾಗೃತಿ ಜಾಥಕ್ಕೆ ಸ್ವಾಗತಿಸಿದ ಗ್ರಾ.ಪಂ. ಆಡಳಿತ

0

ಸಂವಿಧಾನದ ಮೌಲ್ಯಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ರಥವು ಐವರ್ನಾಡು ಗ್ರಾಮಕ್ಕೆ ಫೆ.18ರಂದು ಮಧ್ಯಾಹ್ನ ಆಗಮಿಸಿದಾಗ ಬಾಂಜಿಕೋಡಿ ಬಳಿಯಿಂದ ಸ್ವಾಗತಿಸಲಾಯಿತು.


ಬಳಿಕ ಮೆರವಣಿಗೆ ಮೂಲಕ ಸಾಗಿ ಗ್ರಾ.ಪಂ. ವಠಾರಕ್ಕೆ ಆಗಮಿಸಿದಾಗ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿಯವರು ರಥದಲ್ಲಿರುವ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಕುತ್ಯಾಡಿ ಅಧ್ಯಕ್ಷತೆ ವಹಿಸಿದ್ದರು.


ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ವೇದಿಕೆಯಲ್ಲಿ ನೋಡೆಲ್ ಅಧಿಕಾರಿ ನಿತಿನ್ ಪ್ರಭು,ತಾಲೂಕು ಕ್ರೀಡಾಧಿಕಾರಿ ಸೂಫಿ ಪೆರಾಜೆ,ಸಮಾಜ ಕಲ್ಯಾಣ ಇಲಾಖೆಯಿಂದ ನಿಯೋಜಿಸಿದ ನೋಡೆಲ್ ಅಧಿಕಾರಿ ಬಾಲಕೃಷ್ಣ,ಐವರ್ನಾಡು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕಮಲಾಕ್ಷ, ಗ್ರಾಮ ಪಂಚಾಯತ್ ಸದಸ್ಯರಾದ ಮಮತ ಉದ್ದಂಪಾಡಿ, ಶರ್ಮಿಳಾ ಚೀಮುಳ್ಳು, ಸುಜಾತ ಪವಿತ್ರಮಜಲು ಉಪಸ್ಥಿತರಿದ್ದರು.

ಸಂಜೀವಿನಿ ಸಂಘದ ಸದಸ್ಯರಿಂದ ನಾಡಗೀತೆ ನಡೆಯಿತು. ಪಂಚಾಯತ್ ಪಿಡಿಒ ಶ್ಯಾಮ್ ಪ್ರಸಾದ್ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.