ಸಂಪಾಜೆ : ಅಟೋರಿಕ್ಷಾ ಹಿಂಬದಿಗೆ ಕಾರು ಡಿಕ್ಕಿಯಾಗಿ ಪಲ್ಟಿ

0

ರಿಕ್ಷಾ ಚಾಲಕನಿಗೆ ಗಾಯ ಆಸ್ಪತೆಗೆ ದಾಖಲು

ಆಟೋ ರಿಕ್ಷಾ ಹಿಂಬದಿಗೆ ಕಾರೊಂದು ಡಿಕ್ಕಿಯಾಗಿ ಆಟೋರಿಕ್ಷಾ ಪಲ್ಟಿಯಾದ ಘಟನೆ ಸಂಪಾಜೆ ಗ್ರಾಮದ ಕೈಪಡ್ಕದಲ್ಲಿ ಫೆ.20ರಂದು ಸಂಜೆ ಸಂಭವಿಸಿದ್ದು, ರಿಕ್ಷಾ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಕೊಡಗು ಸಂಪಾಜೆಯಿಂದ ಕಲ್ಲುಗುಂಡಿಗೆ ಆಟೋ ರಿಕ್ಷಾ ಬರುತ್ತಿದ್ದು ಹಿಂಬದಿಯಿಂದ ಅತೀ ವೇಗದಲ್ಲಿ ಬಂದ ಅಲ್ಟೋ ಕಾರು ರಿಕ್ಷಾದ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಅಟೋ ರಿಕ್ಷಾ ಪಲ್ಟಿಯಾಗಿದ್ದು,
ಅಟೋರಿಕ್ಷಾ ಚಾಲಕನಿಗೆ ಗಾಯವಾಗಿದ್ದು, ಗಾಯಾಳುವನ್ನು ಸ್ಥಳೀಯರು ಸೇರಿ ಸುಳ್ಯದ ಅಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ.