ವಿಕಲಚೇತನ ವ್ಯಕ್ತಿಯ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಒಮ್ನಿ ಕಾರು

0

ಸವಾರ ಮತ್ತು ಸಹಸವಾರರಿಗೆ ಗಾಯ : ಆಸ್ಪತ್ರೆಗೆ ದಾಖಲು

ಸುಳ್ಯ ಗಾಂಧಿನಗರದ ಬಳಿ ವಿಕಲಚೇತನ ವ್ಯಕ್ತಿ ತಮ್ಮ ಮೂರು ಚಕ್ರದ ವಾಹನದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಹಿಂಬದಿಯಿಂದ ವೇಗವಾಗಿ ಬಂದ ಓಮ್ನಿಕಾರು ಡಿಕ್ಕಿ ಹೊಡೆದು ಸವಾರರು ಗಂಭೀರ ಗಾಯಗೊಂಡ ಘಟನೆ ಫೆಬ್ರವರಿ 21ರಂದು ಸಂಜೆ ನಡೆದಿದೆ.

ಪೈಚಾರಿನಲ್ಲಿ ಗೂಡಂಗಡಿ ನಡೆಸುತ್ತಿದ್ದ ರಫೀಕ್ ಎಂಬುವರು ತಮ್ಮ ಪತ್ನಿಯೊಂದಿಗೆ ಮೂರು ಚಕ್ರದ ಸ್ಕೂಟರ್ ನಲ್ಲಿ ಗಾಂಧಿನಗರದತ್ತ ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ಕಾರು ಇವರ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು ಘಟನೆಯಿಂದ ರಫೀಕ್ ಮತ್ತು ಅವರ ಪತ್ನಿಗೆ ಗಂಭೀರ ಗಾಯವಾಗಿದೆ.


ಈ ಸಂದರ್ಭ ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಿಂದ ರಫೀಕ್ ರವರ ಕೈ ಮುರಿತಕ್ಕೊಳ್ಳಗಾಗಿದ್ದು ಅವರ ಪತ್ನಿಯ ತಲೆಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.