ಕಲ್ಲುಗುಂಡಿ : ಪುಟ್ಟ ಮಗುವಿನ ಚಿಕಿತ್ಸೆಗೆ ಬಿ.ಎಂ.ಎಸ್.ಆಟೋ ಚಾಲಕ ಸಂಘದಿಂದ ಸಹಾಯಹಸ್ತ

0

ಬಿಎಂಎಸ್ ಆಟೋ ಚಾಲಕರ ಸಂಘ ಕಲ್ಲುಗುಂಡಿ ಘಟಕದ ವತಿಯಿಂದ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಪುಟ್ಟ ಮಗುವಿಗೆ ಸಹಾಯ ಹಸ್ತವನ್ನು ನೀಡಲಾಯಿತು.


ಚೆಂಬು ಗ್ರಾಮದ ಆನ್ಯಾಳ ಅಜಿತ್ ಎಸ್. ಹಾಗೂ ಅನುಪಮಾ ದಂಪತಿಗಳ ಪುತ್ರಿ ಆರ್ವಿ (4 ವರ್ಷ)ಯು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲ್ಲುಗುಂಡಿಯ ಬಿಎಂಎಸ್ ಆಟೋ ಚಾಲಕ ಸಂಘದವರು ಹಣವನ್ನು ಸಂಗ್ರಹಿಸಿ ಅಜಿತ್ ಅವರ ತಂದೆ -ತಾಯಿ ಮೂಲಕ ಹಸ್ತಾಂತರಿಸಿದರು.


ಈ ವೇಳೆ ಬಿಎಂಎಸ್ ಅಟೋ ಚಾಲಕ ಸಂಘದ ಅಧ್ಯಕ್ಷ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಇದರ ಜೊತೆಗೆ ಗ್ರಾಮಸ್ಥರು, ಪರವೂರಿನಿಂದ ದಾನಿಗಳು ಸಹಾಯ ಹಸ್ತ ಚಾಚಿದ್ದಾರೆ.