ಗ್ರಾಮ ಚಲೋ ಕಾರ್ಯಕ್ರಮ ಯಶಸ್ವಿಗೊಳಿಸಿ : ಲೋಕಸಭಾ‌ ಚುನಾವಣೆಯಲ್ಲಿ ಸುಳ್ಯದಿಂದ 60 ಸಾವಿರ ಲೀಡ್:ಸತೀಶ್ ಕುಂಪಲ

0

ಸುಳ್ಯ‌ ಬಿಜೆಪಿ ಕಾರ್ಯ ನಿರ್ವಹಣಾ ತಂಡದ ಸಭೆ

ಮುಂದಿನ ಲೋಕಸಭಾ ಚುನಾವಣೆ ನಡೆದ ಬಳಿಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಜಿಲ್ಲೆಯಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿನಲ್ಲಿ ಬಿಜೆಪಿಯ ಶಕ್ತಿ ಕೇಂದ್ರವಾಗಿರುವ ಸುಳ್ಯದಿಂದ ದೊಡ್ಡ ಶಕ್ತಿ ತುಂಬುವ ಕೆಲಸ ಆಗಬೇಕು. ಸುಮಾರು 60 ರಿಂದ 70 ಸಾವಿರ ಲೀಡ್ ಎಲ್ಲರೂ ಸೇರಿ ಸುಳ್ಯದಿಂದ ಕೊಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಫೆ.23ರಂದು ಸುಳ್ಯದ ಬಿಜೆಪಿ‌ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಗ್ರಾಮ ಚಲೋ ಕಾರ್ಯಕ್ರಮ, ಗೋಡೆ ಬರಹ, ನಮ್ಮ ಸರಕಾರದ ಯೋಜನೆ ಮನೆ ಮನೆಗೆ ತಲುಪಿಸುವ ಕೆಲಸಗಳನ್ನು ಈ ಬಾರಿ ಬಿಜೆಪಿ ಹಮ್ಮಿಕೊಂಡಿದ್ದು ಅದು ಇನ್ನೂ ಸುಳ್ಯ ಕ್ಷೇತ್ರದಲ್ಲಿ ಆರಂಭಗೊಂಡಿಲ್ಲ. ಆ ಕಾರ್ಯಕ್ರಮಗಳನ್ನು ಇಂದಿನಿಂದಲೇ ಆರಂಭಿಸೋಣ ಅದಕ್ಕಾಗಿ ನೀವೆಲ್ಲರೂ ಇಲ್ಲಿ ಸೇರಿಸಿದ್ದೀರಿ ಎಂದು‌ ನಾನು ತಿಳಿದುಕೊಳ್ಳುತ್ತೇನೆ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ಅವರು ಹೇಳಿದರು.

ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಮಂಡಲಾಧ್ಯಕ್ಷ ‌ವೆಂಕಟ್ ವಳಲಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎ.ವಿ.ತೀರ್ಥರಾಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರುಗಳಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಕಾರ್ಯದರ್ಶಿ ‌ವಿನಯ‌ ಮುಳುಗಾಡು, ಜಿಲ್ಲಾ ಎಸ್.ಟಿ
ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ನಾಯ್ಕ್ ವೇದಿಕೆಯಲ್ಲಿ ಇದ್ದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ‌ಮೇನಾಲ‌ ಸ್ವಾಗತಿಸಿದರು.