ಕಲ್ಲಪಳ್ಳಿ ಆಲುಗುಂಜ ಕುಟುಂಬದ ಯಜಮಾನರಾದ ಎ.ಕೆ.ಸೋಮನಾಥ ಗೌಡ (76) ಅಲ್ಪ ಕಾಲದ ಅಸೌಖ್ಯದಿಂದ ವಿಧಿವಶರಾಗಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಫೆ.23ರಂದು ರಾತ್ರಿ ನಿಧನರಾದರು.
ಆಲುಗುಂಜ ಮನೆತನದ ಹಿರಿಯರಾಗಿದ್ದ ಎ.ಕೆ. ಸೋಮನಾಥ ಗೌಡ ಪ್ರಗತಿಪರ ಕೃಷಿಕರಾಗಿದ್ದರು. ಪನತ್ತಡಿ ಪಂಚಾಯತ್ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದರು. ರಾಜಕೀಯ, ಮತ್ತು ಸಾಮಾಜಿಕ ಜೀವನದಲ್ಲಿ ಗುರುತಿಸಿಕೊಂಡಿದ್ದರು. ಇವರು ಪತ್ನಿ ಶ್ರೀಮತಿ ಪಾರ್ವತಿ, ಮಕ್ಕಳಾದ ಜಗದೀಶ್, ಮನಮೋಹನ್, ಹರೀಶ್ ಶ್ರೀಮತಿ ಕುಸುಮ, ಸೊಸೆಯವರಾದ ಶ್ರೀಮತಿ ಮಧುರ, ಶ್ರೀಮತಿ ಜ್ಯೋತಿ ಶ್ರೀಮತಿ ಚಂದ್ರಿಕಾ, ಅಳಿಯ ಆನಂದ, ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ.