ಜಿಲ್ಲಾ ಮಟ್ಟದ ಕ್ರೀಡಾಕೂಟ : ಸುಳ್ಯ ತಾ.ಮಹಿಳಾ ಒಕ್ಕೂಟಕ್ಕೆ ಸಮಗ್ರ ಪ್ರಶಸ್ತಿ

0

ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು ಇವರು ಉಜಿರೆ ರತ್ನವರ್ಮ ಕ್ರೀಡಾಂಗಣದಲ್ಲಿ ಫೆ.25 ರಂದು ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡೋತ್ಸವದಲ್ಲಿ ಸುಳ್ಯ ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟ ಭಾಗವಹಿಸಿ ಸ್ಪರ್ಧೆಯ ಎಲ್ಲ ಹತ್ತು ವಿಭಾಗಗಳಲ್ಲಿಯೂ ಬಹುಮಾನಗಳನ್ನು ಪಡೆದು ಸಮಗ್ರ ಪ್ರಶಸ್ತಿ ಪಡೆದು ಕೊಂಡಿದೆ.

ಸುಳ್ಯ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಶೆಟ್ಟಿ ಬೊಳ್ಳೂರು ಮತ್ತು ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಡಿ. ಪ್ರಸಾದ್ ರವರು ಸುಳ್ಯ ತಂಡದ ನೇತೃತ್ವ ವಹಿಸಿದ್ದರು. ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ ಮತ್ತು ಶ್ರೀಮತಿ ಶಿಲ್ಪಾ ಸುದೇವ್ ಜತೆಗಿದ್ದರು.