ಕೊಡಿಯಾಲ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ 49ನೇ ವಾರ್ಷಿಕೋತ್ಸವ

0

ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕೊಡಿಯಾಲ, ಕಲ್ಲಗದ್ದೆ ಇದರ 49ನೇ ವಾರ್ಷಿಕೋತ್ಸವ ಮಾ. 2ರಂದು ಜರಗಿತು. ಇದರ ಅಂಗವಾಗಿ ಜ. 25ರಿಂದ ನಗರಭಜನೆಗೆ ಆರಂಭಗೊಂಡು ಕೊಡಿಯಾಲ ಗ್ರಾಮದ ಪ್ರತೀ ಮನೆಗಳಿಗೆ ತೆರಲಿ ಭಜನಾ ಕಾರ್ಯಕ್ರಮ ನಡೆಯಿತು.

ಮಾ. 2ರಂದು ಭಜನಾ ಸಮಾರೋಪ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲನದ ಬಳಿಕ ಭಜನಾರಂಭಗೊಂಡಿತು.

ರಾತ್ರಿ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕೊಡಿಯಾಲ, ಕಲ್ಲಗದ್ದೆ ಇದರ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಸ್ವಾಗತಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚ್ಯವಸ್ತು ಸಂಗ್ರಹಕಾರರಾದ ಶಶಿಕುಮಾರ್ ಭಟ್ ಪಡಾರು ದೀಪ ಬೆಳಗಸಿ ಕಾರ್ಯಕ್ರಮ ಉದ್ಘಾಟಿಸಿದರು. ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಧಾರ್ಮಿಕ ಉಪನ್ಯಾಸ ನೀಡಿದರು. ಸಂಗೀತ ಕಲಾಪೋಷಕ ಕಡ್ಯ ವಾಸುದೇವ ಭಟ್ ಕಡಬ, ಕೊಡಿಯಾಲ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಬಿ. ಅಶೋಕ್ ಪೈ, ರಾಜ್ಯ ಕೃಷಿ ಪಂಡಿತ್ ಪ್ರಶಸ್ತಿ ಪುರಸ್ಕೃತರಾದ ಕೆ. ತಿರುಮಲೇಶ್ವರ ಭಟ್ ಕುರಿಯಾಜೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರುಕ್ಮಯ್ಯ ಗೌಡ ಕುಂಠಿನಿ, ಶ್ರೀಕಾಂತ್ ನಿಡ್ಮಾರು, ಕುಕ್ಕಪ್ಪ ಗೌಡ ಕುಂಠಿನಿ ಮತ್ತು ಭಾಸ್ಕರ ಗೌಡ ಹಡೀಲು ಸನ್ಮಾನ ಪತ್ರ ವಾಚಿಸಿದರು. ಕು. ದೇವಿಕಾ ರಾಣಿ ಕುರಿಯಾಜೆ ಪ್ರಾರ್ಥಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

ಮಂಡಳಿ ಉಪಾಧ್ಯಕ್ಷ ಭಾಸ್ಕರ ಹಡೀಲು ವಂದಿಸಿದರು. ಸಂಜೆ ಶ್ರೀ ಸತ್ಯನಾರಾಯಣ ಪೂಜೆಗೆ ಪ್ರಾರ್ಥನೆ ನಡೆದು ಸಭಾ ಕಾರ್ಯಕ್ರಮದ ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ರಾತ್ರಿಯಿಂದ ಬೆಳಿಗ್ಗೆಯ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಕಲ್ಪಣೆ ಇದರ ಕಲಿಕಾ ವಿದ್ಯಾರ್ಥಿಗಳಿಂದ ಕುಣಿತ ಭಜನೆ ನಡೆಯಿತು. ಮಾ. 3ರಂದು ಮುಂಜಾನೆ 6.15 ಕ್ಕೆ ಭಜನಾ ಮಂಗಳೋತ್ಸವ ನಡೆಯಲಿದೆ.

ನಮ್ಮ ನಾಲಿಗೆಯ ಮೂಲಕ ಭಗವಂತನ ನಾಮ ಸ್ಮರಣೆ ಮಾಡಿ ಆ ಮೂಲಕ ಧನ್ಯರಾಗೋಣ. ಬದುಕು ಸಾರ್ತಕಗೊಳ್ಳಬೇಕಾದರೆ ಭಗವಂತನ ಸ್ಮರಣೆ ನಿತ್ಯ ಮಾಡಬೇಕು. ಆ ಮೂಲಕ ನಮ್ಮ ಜೀವನದಲ್ಲಿ ನಾವು ಎತ್ತರಕ್ಕೆ ಏರಲು ಸಾಧ್ಯ – ರಾಮಕೃಷ್ಣ ಕಾಟುಕುಕ್ಕೆ