20 ವರ್ಷಗಳ ಬಳಿಕ ಭಕ್ತಾದಿಗಳಿಗೆ ದರುಶನ ನೀಡಿದ ಮುಚ್ಚಿಲೋಟ್ ಭಗವತಿ

0

ಲಕ್ಷಾಂತರ ಭಕ್ತಾದಿಗಳನ್ನು ಸಾಕ್ಷಿಯಾಗಿರಿಸಿ ವೈಭವದಿಂದ ನಡೆದ ಪೆರ್ಣೆ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ

ಕಾಸರಗೋಡು ಜಿಲ್ಲೆಯ ಕುಂಬ್ಳೆ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಕಳಿಯಾಟ ಮಹೋತ್ಸವವು ಮಾ.1ರಿಂದ ಮಾ.7 ರವರೆಗೆ ನಡೆಯಿತು.


20 ವರ್ಷಗಳ ನಂತರ ಮಾ.7 ರಂದು ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ ನಡೆಯಿತು.

ಮಾ.6 ರಂದು ಬೆಳಿಗ್ಗೆ ಪುಲ್ಲೂರುಕಣ್ಣನ್, ಕಣ್ಣಂಗಾಟ್ ಭಗವತಿ ಮತ್ತು ಪಡಿಞರ್ ಚಾಮುಂಡಿ ದೈವದ ನರ್ತನ ನಡೆದು, ಮಧ್ಯಾಹ್ನ ತಚ್ಚಿಲೋನ್ ದೈವದ ವೆಳ್ಳಾಟ, ಸಂಜೆ ತಚ್ಚಿಲೋನ್ ಮತ್ತು ನಾಯನಾರ್ ದೈವಗಳ ನರ್ತನ ನಡೆಯಿತು. ರಾತ್ರಿ ದರ್ಶನದೊಂದಿಗೆ ಮೇಲೇರಿಗೆ ಕೊಳ್ಳಿ ತರುವುದು, ಅಗ್ನಿ ಸ್ಪರ್ಶ ನಡೆಯಿತು.

ಮಾ.7 ರಂದು ಬೆಳಿಗ್ಗೆ ನರಂಬಿಲ್ ಭಗವತಿ ದೈವದ ನಡೆದು, ಪುಲ್ಲೂರ್‌ಕಾಳಿ, ತೀಪಾತಿ ದೈವದ ನರ್ತನ ದೈವದ ನರ್ತನದ ಬಳಿಕ ಅಗ್ನಿಸೇವೆ ನಡೆಯಿತು.
ಬಳಿಕ ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ ನಡೆದು ಬಳಿಕ ಪುಲ್ಲೂರ್‌ಕಾಳಿ ದೈವದೊಂದಿಗೆ ಭೇಟಿಯಾಗಿ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಭಕ್ತಾಧಿಗಳು ಉಪಸ್ಥಿತರಿದ್ದು, ಅಮ್ಮನವರ ಪ್ರಸಾದ ಸ್ವೀಕರಿಸಿದರು.