ಉಬರಡ್ಕ: ವೈಜ್ಞಾನಿಕ ಜೇನು ಕೃಷಿ ತರಬೇತಿ ಹಾಗೂ ಜೇನು ಪೆಟ್ಟಿಗೆ ಮತ್ತು ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮ

0

ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ವತಿಯಿಂದ ಸುಳ್ಯ ತಾಲೂಕಿನ ಉಬರಡ್ಕ ಗ್ರಾಮ ಪಂಚಾಯತ್ ನಲ್ಲಿ ವೈಜ್ಞಾನಿಕ ಜೇನು ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉಬರಡ್ಕ ಗ್ರಾ.ಪಂ.ಸದಸ್ಯ ಹರೀಶ್ ಉಬರಡ್ಕ ರವರು ಉದ್ಘಾಟಿಸಿ ರೈತರಿಗೆ ಜೇನು ಕೃಷಿಯ ಕುರಿತು ವೈಜ್ಞಾನಿಕ ಮಾಹಿತಿಯನ್ನು ಪಡೆದುಕೊಳ್ಳಲು ತಿಳಿಸಿದರು. ಡಾ. ಟಿ. ಜೆ. ರಮೇಶ ರವರು ವೈಜ್ಞಾನಿಕ ಜೇನು ಕೃಷಿಯ ಮಹತ್ವದ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡಿದರು.

ಡಾ. ಕೇದಾರನಾಥ ಹಾಗೂ ಗಿರಿಧರ ದಾಸ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವೈಜ್ಞಾನಿಕ ಜೇನು ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದ ಸಂಯೋಜಕರಾದ ಡಾ. ಮಲ್ಲಿಕಾರ್ಜುನ ಎಲ್. ರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಪ್ರಕಾಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಉಬರಡ್ಕ, ಸಂದೀಪ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ 25 ರೈತರು ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ 25 ಜನ ರೈತರಿಗೆ ಕೃಷಿ ಪರಿಕರಗಳಾದ ಜೇನು ಪೆಟ್ಟಿಗೆ, ಮರ ಹತ್ತುವ ಎಣಿ ಹಾಗೂ ತೆಂಗಿನ ಮರ ಹತ್ತುವ ಯಂತ್ರಗಳನ್ನು ಆಯ್ದ ಪರಿಶಿಷ್ಟ ಜಾತಿಯ ಪಾಲನುಭವಿ ರೈತರಿಗೆ ವಿತರಿಸಲಾಯಿತು.